ಕೋಲ್ಕತ್ತ: ಐಎಸ್‌ಎಲ್ ಚಾಂಪಿಯನ್ ಮೋಹನ್‌ಬಾಗನ್ ಸೂಪರ್ ಜೈಂಟ್ಸ್ ತಂಡ, ಗುರುವಾರ ನಡೆದ 132ನೇ ಡುರಾಂಡ್ ಕಪ್ ಫುಟ್‌ಬಾಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಬಾಂಗ್ಲಾದೇಶ ಆರ್ಮಿ ತಂಡವನ್ನು 5–0 ಗೋಲುಗಳಿಂದ ಸೋಲಿಸಿ ಫುಟ್‌ಬಾಲ್ ಋತುವನ್ನು ಅಮೋಘ ರೀತಿಯಲ್ಲಿ ಆರಂಭಿಸಿತು.
ಭಾರತ ತಂಡದ ಆಟಗಾರರು ಪಂದ್ಯದ ಹೆಚ್ಚಿನ ಭಾಗ ಪ್ರಾಬಲ್ಯ ಮೆರೆದರು. ಲಿಸ್ಟನ್ ಕೊಲಾಕೊ (14ನೇ ನಿಮಿಷ), ಮನ್ವೀರ್ ಸಿಂಗ್ (29ನೇ), ಸುಹೇಲ್ ಅಹ್ಮದ್ ಭಟ್ (39ನೇ), ಲಾಲ್‌ರಿನ್ಲಿಯಾನ ನಮ್ಟೆ (59ನೇ) ಮತ್ತು ಕಿಯಾಣ್ ನಾಸಿರಿ (89) ಗೋಲು ಗಳಿಸಿದರು.
21 ವರ್ಷದ ಸುಮಿತ್ ನೇತೃತ್ವದ ಈ ತಂಡ ಪೂರ್ಣಶಕ್ತಿ ಬಳಸಿ ಆಡಲಿಲ್ಲ. ವಿದೇಶಿ ಆಟಗಾರರನ್ನು ಆಡಿಸಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.