ADVERTISEMENT

ಯುರೋ ಕಪ್‌ ಫುಟ್‌ಬಾಲ್‌ ಟೂರ್ನಿ: ಆತಿಥೇಯ ಜರ್ಮನಿಗೆ ಗೆಲುವು

ಯುರೋ ಕಪ್‌ ಫುಟ್‌ಬಾಲ್‌ ಟೂರ್ನಿ: ಸ್ವಿರ್ಜಲೆಂಡ್‌ಗೆ ಮಣಿದ ಹಂಗೆರಿ

ಏಜೆನ್ಸೀಸ್
Published 16 ಜೂನ್ 2024, 4:57 IST
Last Updated 16 ಜೂನ್ 2024, 4:57 IST
<div class="paragraphs"><p> ಫುಟ್‌ಬಾಲ್‌</p></div>

ಫುಟ್‌ಬಾಲ್‌

   

ಮ್ಯೂನಿಚ್‌: ಆತಿಥೇಯ ಜರ್ಮನಿ ತಂಡವು ಯುರೋಪಿಯನ್ ಚಾಂಪಿಯನ್‌ಷಿಪ್‌ನ ಆರಂಭಿಕ ಪಂದ್ಯದಲ್ಲಿ 5–1 ಗೋಲುಗಳಿಂದ ಸ್ಕಾಟ್ಲೆಂಡ್‌ ತಂಡವನ್ನು ಸೋಲಿಸಿತು.

ಶುಕ್ರವಾರ ತಡರಾತ್ರಿ ನಡೆದ ಈ ಪಂದ್ಯದ 10ನೇ ನಿಮಿಷ ಫ್ಲೋರಿಯನ್ ವಿರ್ಟ್ಜ್ ಮೊದಲ ಗೋಲು ಗಳಿಸಿದರೆ, ಜಮಾಲ್ ಮುಸಿಯಾಲಾ  (19ನೇ ನಿ) ಜರ್ಮನಿಯ ಮುನ್ನಡೆಯನ್ನು ದ್ವಿಗುಣಗೊಳಿಸಿದರು. ನಂತರ ಕೈ ಹ್ಯಾವರ್ಟ್ಜ್ (45+1 ಪೆನಾಲ್ಟಿ), ನಿಕೊಲಸ್‌ ಫ್ಯೂಯೆಲ್ಕ್ರುಗ್ (68ನಿ) ಮತ್ತು ಎಮ್ರೆ ಕ್ಯಾನ್ (90+3) ಗೋಲು ಗಳಿಸಿದರು. ಸ್ಕಾಟ್ಲೆಂಡ್‌ಗೆ ಜರ್ಮನಿಯ  ಆಂಟೋನಿಯೊ ರುಡಿಗರ್ (87 ನಿಮಿಷ) ಅವರು ಉಡುಗೊರೆ ಗೋಲು ನೀಡಿದರು. 

ADVERTISEMENT

ಒರಟು ಆಟವಾಡಿದ ಸ್ಕಾಟ್ಲೆಂಡ್‌ನ ರಯಾನ್ ಪೋರ್ಟಿಯಸ್‌ ಅವರಿಗೆ ವಿರಾಮಕ್ಕೆ ಮೊದಲಿನ ಅವಧಿಯಲ್ಲಿ ರೆಡ್ ಕಾರ್ಡ್ ತೋರಿಸಿ ಹೊರಗೆ ಕಳುಹಿಸಲಾಯಿತು. ಹೀಗಾಗಿ ತಂಡ ಹತ್ತು ಆಟಗಾರರಿಗೆ ಸೀಮಿತಗೊಂಡಿತು. ಈ ವೇಳೆ ಜರ್ಮನಿಗೆ ದೊರೆತ ಪೆನಾಲ್ಟಿ ಅವಕಾಶವನ್ನು ಕೈ ಹ್ಯಾವರ್ಟ್ಜ್ ಅವರು ಗೋಲು ಆಗಿ ಪರಿವರ್ತಿಸಿದರು.

ಶನಿವಾರ ಕೊಲೋನ್‌ನಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಸ್ವಿಟ್ಜರ್ಲೆಂಡ್ ತಂಡವು 3–1 ರಿಂದ ಹಂಗೆರಿ ತಂಡವನ್ನು ಸೋಲಿಸಿತು. 

ಸ್ವಿಟ್ಜರ್ಲೆಂಡ್ ಪರ ಕ್ವಾಡ್ವೊ ದುವಾ (12ನೇ ನಿಮಿಷ), ಮೈಕೆಲ್ ಎಬಿಸ್ಚರ್ (45 ನಿ) ಮತ್ತು ಬ್ರೀಲ್ ಎಂಬೋಲೊ (90+3) ಗೋಲು ಗಳಿಸಿದರೆ, ಹಂಗೆರಿ ಪರ ಬರ್ನಾಬಸ್ ವರ್ಗ (66 ನಿ) ಏಕೈಕ ಗೋಲು ಗಳಿಸಿದರು. 

ಸ್ಪೇನ್‌ ಶುಭಾರಂಭ: ಮೂರು ಬಾರಿಯ ಚಾಂಪಿಯನ್‌ ಸ್ಪೇನ್‌ ತಂಡವು ‘ಬಿ’ ಗುಂಪಿನ ಪಂದ್ಯದಲ್ಲಿ 3–0ಯಿಂದ ಕ್ರೊಯೇಷಿಯಾ ತಂಡವನ್ನು ಸುಲಭವಾಗಿ ಮಣಿಸಿತು. ಅಲ್ವಾರೊ ಮೊರಾಟಾ (29ನೇ ನಿ), ಫ್ಯಾಬಿಯನ್ ರೂಯಿಜ್ (32ನೇ ನಿ) ಮತ್ತು ಡ್ಯಾನಿ ಕರ್ವಾಜಾಲ್ (45+2ನೇ ನಿ) ಸ್ಪೇನ್‌ ಪರ ಗೋಲು ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.