ADVERTISEMENT

ಫುಟ್‌ಬಾಲ್: 23 ಸದಸ್ಯರ ಭಾರತ ಮಹಿಳಾ ತಂಡ ಪ್ರಕಟ

ಮ್ಯಾನ್ಮಾರ್‌ ವಿರುದ್ಧ ಸೌಹಾರ್ದ ಪಂದ್ಯ

ಪಿಟಿಐ
Published 7 ಜುಲೈ 2024, 13:58 IST
Last Updated 7 ಜುಲೈ 2024, 13:58 IST
 ಚಾವೊಬಾ ದೇವಿ
 ಚಾವೊಬಾ ದೇವಿ   

ನವದೆಹಲಿ: ಯಾಂಗೊಗ್‌ನಲ್ಲಿ ಜುಲೈ 9 ಮತ್ತು 12ರಂದು ನಡೆಯಲಿರುವ ಮ್ಯಾನ್ಮಾರ್ ವಿರುದ್ಧದ ಎರಡು ಸೌಹಾರ್ದ ಪಂದ್ಯಗಳಿಗೆ 23 ಮಂದಿಯ ಹಿರಿಯ ಮಹಿಳಾ ತಂಡವನ್ನು ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ ಶನಿವಾರ ಪ್ರಕಟಿಸಿದೆ.

ಗೋಲ್ ಕೀಪಿಂಗ್ ವಿಭಾಗದಲ್ಲಿ ಶ್ರೇಯಾ ಹೂಡಾ, ಎಲಾಂಗ್ಬಾಮ್ ಪಂಥೋಯ್ ಚಾನು ಮತ್ತು ಮೈಬಾಮ್ ಲಿಂಥೋಯಿಂಗಂಬಿ ದೇವಿ ಇದ್ದರೆ, ಲೊಯ್ಟೊಂಗ್ಬಾಮ್ ಆಶಾಲತಾ ದೇವಿ, ಹೇಮಮ್ ಶಿಲ್ಕಿ ದೇವಿ, ಸಂಜು, ವಾಂಗ್ಖೆಮ್ ಲಿಂಥೋಯಿಂಗಾಂಬಿ ದೇವಿ ಮತ್ತು ಅರುಣಾ ಬಾಗ್ ರಕ್ಷಣಾ ವಿಭಾಗವನ್ನು ನಿರ್ವಹಿಸಲಿದ್ದಾರೆ.

ಮಿಡ್‌ಫಿಲ್ಡ್‌ನಲ್ಲಿ ನೌರೆಮ್ ಪ್ರಿಯಾಂಕಾ ದೇವಿ, ಸಂಗೀತಾ ಬಾಸ್ಫೋರ್, ಕಾರ್ತಿಕಾ ಅಂಗಮುತ್ತು, ನೇಹಾ, ನೊಂಗ್ಮೈಥೆಮ್ ರತನ್ಬಾಲಾ ದೇವಿ ಮತ್ತು ಮೌಸುಮಿ ಮುರ್ಮು ಅವರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 

ADVERTISEMENT

ಫಾರ್ವರ್ಡ್ ವಿಭಾಗದಲ್ಲಿ ಕಾಜೋಲ್ ಹಬರ್ಟ್ ಡಿಸೋಜಾ, ಅಂಜು ತಮಾಂಗ್, ಸೌಮ್ಯ ಗುಗುಲೋತ್, ಸಂಧ್ಯಾ ರಂಗನಾಥನ್, ಕರಿಷ್ಮಾ ಪುರುಷೋತ್ತಮ್ ಶಿರ್ವೋಯ್ಕರ್, ಲಿಂಡಾ ಕೋಮ್ ಸೆರ್ಟೊ, ಪ್ಯಾರಿ ಕ್ಸಾಕ್ಸಾ, ಜ್ಯೋತಿ ಮತ್ತು ರಿಂಪಾ ಹಲ್ದಾರ್ ಇದ್ದಾರೆ.

‘ನಮ್ಮ ತಂಡವು ಹಿರಿಯ ಮತ್ತು ಕಿರಿಯ ಆಟಗಾರರ ಮಿಶ್ರಣವಾಗಿದೆ. ತಂಡದ ಸಂಯೋಜನೆಯಿಂದ ನನಗೆ ತೃಪ್ತಿ ಇದೆ. ಕಳೆದ ತಿಂಗಳು ಉಜ್ಬೇಕಿಸ್ತಾನ ವಿರುದ್ಧ ಆಡಿದ ನಂತರ, ಮುಂದಿನ 10 ದಿನಗಳಲ್ಲಿ ಶಿಬಿರವನ್ನು ಪ್ರಾರಂಭಿಸಿದ್ದೇವೆ’ ಎಂದು ಮುಖ್ಯ ಕೋಚ್ ಚಾವೊಬಾ ದೇವಿ ಎಐಎಫ್ಎಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ‘ಎಲ್ಲಾ ಆಟಗಾರರು ಫಿಟ್ ಆಗಿದ್ದಾರೆ, ಇದು ಉತ್ತಮ ಸಂಕೇತವಾಗಿದೆ. ಅವರು ವಿಶ್ರಾಂತಿ ಪಡೆಯಲು ಬಯಸಲಿಲ್ಲ. ಆಯಾ ಕ್ಲಬ್‌ಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.