ADVERTISEMENT

ಫುಟ್‌ಬಾಲ್‌ ಆಟಗಾರ ಸಂಪತ್‌ ನಿಧನ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2023, 19:31 IST
Last Updated 7 ಮಾರ್ಚ್ 2023, 19:31 IST
ಕೆ.ಸಂಪತ್‌
ಕೆ.ಸಂಪತ್‌   

ಬೆಂಗಳೂರು: ಭಾರತದ ಫುಟ್‌ಬಾಲ್‌ ಕಂಡಂತಹ ಶ್ರೇಷ್ಠ ಗೋಲ್‌ಕೀಪರ್‌ಗಳಲ್ಲಿ ಒಬ್ಬರಾದ ಕೆ.ಸಂಪತ್‌ (76) ಮಂಗಳವಾರ ಇಲ್ಲಿ ನಿಧನರಾದರು. ಅವರಿಗೆ ಪುತ್ರಿ ಇದ್ದಾರೆ.

ವಿವಿಧ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಅವರು 1968 ರಲ್ಲಿ ಸಂತೋಷ್‌ ಟ್ರೋಫಿ ಜಯಿಸಿದ್ದ ಕರ್ನಾಟಕ ತಂಡದ (ಅಂದಿನ ಮೈಸೂರು ರಾಜ್ಯ) ಗೋಲ್‌ಕೀಪರ್‌ ಆಗಿದ್ದರು. ಸಂತೋಷ್‌ ಟ್ರೋಫಿ ಟೂರ್ನಿಯಲ್ಲಿ ಸರ್ವಿಸಸ್‌ ಮತ್ತು ಗೋವಾ ತಂಡಗಳನ್ನೂ ಪ್ರತಿನಿಧಿಸಿದ್ದರು.

1970ರ ಮರ್ಡೆಕಾ ಕಪ್‌ ಟೂರ್ನಿ ಮತ್ತು ಬ್ಯಾಂಕಾಂಕ್‌ ಏಷ್ಯನ್‌ ಗೇಮ್ಸ್‌ನಲ್ಲಿ ಕಂಚು ಜಯಿಸಿದ್ದ ಭಾರತ ತಂಡದಲ್ಲಿ ಅವರು ಆಡಿದ್ದರು. 1971ರ ಕಿಂಗ್ಸ್‌ ಕಪ್ ಮತ್ತು 1972ರ ಮರ್ಡೆಕಾ ಕಪ್‌ನಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಎಂಇಜಿ ಮತ್ತು ಡೆಂಪೊ ಸ್ಪೋರ್ಟ್ಸ್‌ ಕ್ಲಬ್‌ ತಂಡಗಳ ಪರ ಆಡಿದ್ದರಲ್ಲದೆ, 1975 ರಲ್ಲಿ ರೋವರ್ಸ್‌ ಕಪ್‌ ಜಯಿಸಿದ್ದ ತಂಡದ ಸದಸ್ಯರಾಗಿದ್ದರು.

ವೃತ್ತಿಜೀವನಕ್ಕೆ ನಿವೃತ್ತಿ ಪ್ರಕಟಿಸಿದ್ದ ಬಳಿಕ ಬಿಇಎಲ್‌ ಮತ್ತು ಎಎಸ್‌ಸಿ ಒಳಗೊಂಡಂತೆ ಕೆಲವು ತಂಡಗಳಿಗೆ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.