ಬೆಂಗಳೂರು: ಕರ್ನಾಟಕ ರಾಜ್ಯ ಪುಟ್‌ಬಾಲ್ ತಂಡದ ಮಾಜಿ ಆಟಗಾರ ಕಣಿಯನ್ (47) ಅವರು ಗುರುವಾರ ಹೃದಯಾಘಾತದಿಂದ ನಿಧನರಾದರು.
1997–98ರಲ್ಲಿ ಅವರು 19 ವರ್ಷದೊಳಗಿನವರ ನ್ಯಾಷನಲ್ ಫುಟ್‌ಬಾಲ್ ಕಾನ್ಫರೆನ್ಸ್ (ಎನ್‌ಎಫ್‌ಸಿ)ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದರು. ಅವರು ಐಟಿಐ ಜೂನಿಯರ್ ತಂಡವನ್ನೂ ಪ್ರತಿನಿಧಿಸಿದ್ದರು. ಎಡಿಇ ಫುಟ್‌ಬಾಲ್ ಕ್ಲಬ್‌ಗಳಲ್ಲಿ ಮಿಡ್‌ಫೀಲ್ಡರ್ ಆಗಿದ್ದ ಅವರು ಗೋಲು ಗಳಿಸಿದ್ದರು. ವಿಂಗ್ಸ್ ಮತ್ತು ಪ್ಲೇ ಮೇಕರ್ ಎರಡಕ್ಕೂ ನಿಖರವಾದ ಪಾಸ್ ನೀಡುವ ಆಟಗಾರನಾಗಿದ್ದರು.
ಪಿಳ್ಳಣ್ಣ ಗಾರ್ಡನ್ ಫುಟ್‌ಬಾಲ್ ಕ್ಲಬ್‌ನ ಪ್ರಮುಖ ಆಟಗಾರನಾಗಿದ್ದ ಅವರು, ಸ್ಥಳೀಯ ಫುಟ್‌ಬಾಲ್ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು. ಅವರ ಮಾರ್ಗದರ್ಶನದಲ್ಲಿ ಹಲವು ಪ್ರತಿಭೆಗಳು ಹೊರಹೊಮ್ಮಿವೆ. ಅವರಿಗೆ ತಾಯಿ, ಸಹೋದರ, ಸಹೋದರಿಯರು ಇದ್ದಾರೆ.
ಕಣಿಯನ್ ಅವರ ಅಂತ್ಯಕ್ರಿಯೆಯು ಗುರುವಾರ ಮಧ್ಯಾಹ್ನ ನೆರವೇರಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.