ADVERTISEMENT

ಫುಟ್‌ಬಾಲ್‌: ಅಗ್ನಿಪುತ್ರ ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 15:47 IST
Last Updated 27 ಅಕ್ಟೋಬರ್ 2024, 15:47 IST
<div class="paragraphs"><p>ಅಗ್ನಿಪುತ್ರ ತಂಡದ ಅಜ್ಫರ್ ನೂರಾನಿ (ಎಡ) ಮತ್ತು ಎಫ್‌ಸಿ ಬೆಂಗಳೂರು ಯುನೈಟೆಡ್‌ನ ಶೋಯಿಬ್ ಅಖ್ತರ್ (ಬಲ) ಚೆಂಡಿಗಾಗಿ ಪೈಪೋಟಿ ನಡೆಸಿದರು  </p></div>

ಅಗ್ನಿಪುತ್ರ ತಂಡದ ಅಜ್ಫರ್ ನೂರಾನಿ (ಎಡ) ಮತ್ತು ಎಫ್‌ಸಿ ಬೆಂಗಳೂರು ಯುನೈಟೆಡ್‌ನ ಶೋಯಿಬ್ ಅಖ್ತರ್ (ಬಲ) ಚೆಂಡಿಗಾಗಿ ಪೈಪೋಟಿ ನಡೆಸಿದರು

   

–ಪ್ರಜಾವಾಣಿ ಚಿತ್ರ: ಎಸ್‌.ಕೆ. ದಿನೇಶ್‌

ಬೆಂಗಳೂರು: ಎಫ್‌ಸಿ ಅಗ್ನಿಪುತ್ರ ತಂಡವು ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಭಾನುವಾರ ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡವನ್ನು 2–1 ಗೋಲುಗಳಿಂದ ಮಣಿಸಿತು.

ADVERTISEMENT

ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅಗ್ನಿಪುತ್ರ ಪರ ಅಜ್ಫರ್ ನೂರಾನಿ (39ನೇ ನಿಮಿಷ) ಮತ್ತು ವಿ.ಸುರೇಂದ್ರಪ್ರಸಾದ್ (66ನೇ) ತಲಾ ಒಂದು ಗೋಲು ಗಳಿಸಿದರು. ಯುನೈಟೆಡ್‌ ಪರ ಅಕ್ಷುನಾ ತ್ಯಾಗಿ (70ನೇ) ಚೆಂಡನ್ನು ಗುರಿ ಸೇರಿಸಿದರು.

ದಿನದ ಮತ್ತೊಂದು ಪಂದ್ಯದಲ್ಲಿ ಎಂಇಜಿ ಅಂಡ್‌ ಸೆಂಟರ್‌ ಎಫ್‌ಸಿ ತಂಡವು 1–0ಯಿಂದ ಎಎಸ್‌ಸಿ ಅಂಡ್ ಸೆಂಟರ್‌ ಎಫ್‌ಸಿ ತಂಡವನ್ನು ಸೋಲಿಸಿತು. ನಿಯಾಜ್ ನಾಜರ್ (38 ನೇ) ಎಂಇಜಿ ಪರ ಗೆಲುವಿನ ಗೋಲು ದಾಖಲಿಸಿದರು.

ಇಂದಿನ ಪಂದ್ಯಗಳು

ಎಂಎಫ್‌ಎಆರ್‌ ಸ್ಟೂಡೆಂಟ್ಸ್‌ ಯೂನಿಯನ್‌ ಎಫ್‌ಸಿ– ಬಿಎಫ್‌ಸಿ (ಮಧ್ಯಾಹ್ನ 12.45)

ರಿಯಲ್‌ ಚಿಕ್ಕಮಗಳೂರು ಎಫ್‌ಸಿ– ಸ್ಪೋರ್ಟಿಂಗ್‌ ಕ್ಲಬ್‌ ಬೆಂಗಳೂರು (ಮಧ್ಯಾಹ್ನ 3.45)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.