ಸೇಂಟ್ ಪೀಟರ್ಸ್‌ಬರ್ಗ್: ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಮೊದಲ ಸೆಮಿಫೈನಲ್‌ನಲ್ಲಿ ಬೆಲ್ಜಿಯಂ ತಂಡವನ್ನು 1-0 ಅಂತರದಲ್ಲಿ ಮಣಿಸಿ ಫ್ರಾನ್ಸ್ ತಂಡ ಫೈನಲ್‍ಗೆ ಲಗ್ಗೆ ಇಟ್ಟಿದೆ.12 ವರ್ಷಗಳ ನಂತರ ಫ್ರಾನ್ಸ್ ಫೈನಲ್ ಹಂತಕ್ಕೇರಿರುವುದು ವಿಶೇಷ.
ಮಂಗಳವಾರ ರಾತ್ರಿ ನಡೆದ ಜಿದ್ದಾಜಿದ್ದಿನ ಪಂದ್ಯದಲ್ಲಿ ಫ್ರಾನ್ಸ್ ತಂಡದ ಡಿಫೆಂಡರ್ ಸಾಮ್ಯುಲ್ ಉಮ್ಟಿಟಿ 51ನೇ ನಿಮಿಷದಲ್ಲಿ ಗೆಲುವಿನ ಗೋಲು ಹೊಡೆದಿದ್ದಾರೆ.
ಇಂದು ರಾತ್ರಿ ಇಂಗ್ಲೆಂಡ್- ಕ್ರೊಯೇಷ್ಯಾ ನಡುವೆ ಪಂದ್ಯ ನಡೆಯಲಿದ್ದು, ಈ ಪಂದ್ಯ ಗೆದ್ದ ತಂಡ ಜುಲೈ 15ರಂದು ರಾತ್ರಿ 8.30ಕ್ಕೆ ಮಾಸ್ಕೊದ ಲುಷ್ನಿಕಿ ಕ್ರೀಡಾಂಗಣದಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡವನ್ನು ಎದುರಿಸಲಿದೆ.
1998ರಲ್ಲಿ ವಿಶ್ವಕಪ್ ಗೆದ್ದಿದ್ದ ಫ್ರಾನ್ಸ್ ತಂಡ 2006ರ ನಂತರ ಇದೇ ಮೊದಲ ಬಾರಿ ಫೈನಲ್ ಪ್ರವೇಶಿಸಿದೆ.
ಸುಳ್ಳಾಯ್ತು ಬೆಕ್ಕಿನ ಭವಿಷ್ಯ
ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ನಲ್ಲಿ ಬೆಲ್ಜಿಯಂ ಗೆಲ್ಲಲಿದೆ ಎಂದು ಅಚಿಲ್ಸ್ ಬೆಕ್ಕು ಭವಿಷ್ಯ ಹೇಳಿತ್ತು, ಆದರೆ ಈ ಭವಿಷ್ಯ ಸುಳ್ಳಾಗಿದ್ದು, ವಿಶ್ವಕಪ್ ಕನಸು ಕಂಡಿದ್ದ ಬೆಲ್ಜಿಯಂ ತಂಡ ಪರಾಭವಗೊಂಡಿದೆ,
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.