ADVERTISEMENT

Euro: ಪೋರ್ಚುಗಲ್ ಮಣಿಸಿ ಸೆಮೀಸ್‌ಗೆ ಲಗ್ಗೆ ಇಟ್ಟ ಫ್ರಾನ್ಸ್‌ಗೆ ಸ್ಪೇನ್ ಸವಾಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಜುಲೈ 2024, 3:08 IST
Last Updated 6 ಜುಲೈ 2024, 3:08 IST
<div class="paragraphs"><p>ಫ್ರಾನ್ಸ್ ಆಟಗಾರರ ಸಂಭ್ರಮ</p></div>

ಫ್ರಾನ್ಸ್ ಆಟಗಾರರ ಸಂಭ್ರಮ

   

(ರಾಯಿಟರ್ಸ್ ಚಿತ್ರ)

ಹ್ಯಾಂಬರ್ಗ್ (ಜರ್ಮನಿ): ಯುರೋ ಕಪ್ ಫುಟ್‌ಬಾಲ್ ಟೂರ್ನಿಯ ರೋಚಕ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪೋರ್ಚುಗಲ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 5-3 ಗೋಲುಗಳ ಅಂತರದ ಜಯ ಗಳಿಸಿರುವ ಫ್ರಾನ್ಸ್, ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

ADVERTISEMENT

ಈ ಪಂದ್ಯ ಹಲವು ವಿಶೇಷತೆಗಳಿಗೆ ಕಾರಣವಾಗಿತ್ತು. ಕಾಲ್ಚೆಂಡಿನ ಲೋಕದ ತಾರೆ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ಫ್ರಾನ್ಸ್‌ ನಾಯಕ ಕಿಲಿಯನ್ ಎಂಬಾಪೆ ನಡುವೆ ನೇರ ಪೈಪೋಟಿಗೆ ಸಾಕ್ಷಿಯಾಗಿತ್ತು.

ಹಾಗೆಯೇ ಯುರೋ ಕಪ್‌ನಲ್ಲಿ ಚಾಂಪಿಯನ್ ಆಟಗಾರ 39 ವರ್ಷದ ರೊನಾಲ್ಡೊ ಅವರ ಕೊನೆಯ ಪಂದ್ಯ ಎಂದೇ ವಿಶ್ಲೇಷಿಸಲಾಗುತ್ತಿದೆ. ಪೆನಾಲ್ಟಿ ಶೂಟೌಟ್‌ನಲ್ಲಿ ರೊನಾಲ್ಡೊ ಗೋಲು ದಾಖಲಿಸಿದರೂ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ.

ಭಾರತೀಯ ಕಾಲಮಾನ ಶುಕ್ರವಾರ ತಡರಾತ್ರಿ ನಡೆದ ಪಂದ್ಯದಲ್ಲಿ 120 ನಿಮಿಷಗಳವರೆಗೂ ಇತ್ತಂಡಗಳು ಗೋಲು ದಾಖಲಿಸುವಲ್ಲಿ ಯಶಸ್ವಿಯಾಗಿರಲಿಲ್ಲ. ಬಳಿಕ ಪೆನಾಲ್ಟಿ ಶೂಟೌಟ್‌ನಲ್ಲಿ ವಿಜೇತರನ್ನು ನಿರ್ಧರಿಸಲಾಯಿತು.

2022ರ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲೇ ಅರ್ಜೇಂಟೀನಾ ವಿರುದ್ಧ ಸೋಲು ಕಂಡಿದ್ದ ಫ್ರಾನ್ಸ್ ರನ್ನರ್-ಅಪ್ ಎನಿಸಿಕೊಂಡಿತ್ತು.

ಜುಲೈ 10ರಂದು ನಡೆಯಲಿರುವ ಜಿದ್ದಾಜಿದ್ದಿನ ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡವೀಗ ಸ್ಪೇನ್ ಸವಾಲನ್ನು ಎದುರಿಸಲಿದೆ. ಮಗದೊಂದು ರೋಚಕ ಪಂದ್ಯದಲ್ಲಿ 2-1ರ ಗೋಲುಗಳಿಂದ ಆತಿಥೇಯ ಜರ್ಮನಿ ತಂಡವನ್ನು ಮಣಿಸಿ ಸ್ಪೇನ್ ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟಿತು.

ಕ್ರಿಸ್ಟಿಯಾನೊ ರೊನಾಲ್ಡೊ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.