ADVERTISEMENT

ISL Final | ಮುಂಬೈ ಸಿಟಿ–ಮೋಹನ್ ಹಣಾಹಣಿ 

ಐಎಸ್‌ಎಲ್‌ ಫೈನಲ್ ಪಂದ್ಯ

​ಪ್ರಜಾವಾಣಿ ವಾರ್ತೆ
Published 3 ಮೇ 2024, 16:12 IST
Last Updated 3 ಮೇ 2024, 16:12 IST
<div class="paragraphs"><p>ಮುಂಬೈ ಸಿಟಿ–ಮೋಹನ್ ಹಣಾಹಣಿ&nbsp;</p></div>

ಮುಂಬೈ ಸಿಟಿ–ಮೋಹನ್ ಹಣಾಹಣಿ 

   

ಕೋಲ್ಕತ್ತ: ಅಮೋಘ ಯಶಸ್ಸಿನ ಓಟದಲ್ಲಿರುವ ಮೋಹನ್ ಬಾಗನ್ ತಂಡ ಶನಿವಾರ ಸಾಲ್ಟ್‌ಲೇಕ್‌ ಕ್ರೀಡಾಂಗಣದಲ್ಲಿ ನಡೆಯುವ ಇಂಡಿಯನ್ ಸೂಪರ್‌ಲೀಗ್‌ ಫೈನಲ್‌ನಲ್ಲಿ ಮುಂಬೈ ಸಿಟಿ ಎಫ್‌ಸಿ ತಂಡವನ್ನು ಎದುರಿಸಲಿದ್ದು, ಚಾರಿತ್ರಿಕ ಮೂರನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.

ತಮ್ಮ ನೆಚ್ಚಿನ ತಂಡವನ್ನು ಹುರಿದುಂಬಿಸಲು 62 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಪಂದ್ಯ ವೀಕ್ಷಿಸಲಿದ್ದು, ಕ್ರೀಡಾಂಗಣ ಬಾಗನ್ ಜರ್ಸಿ ಬಣ್ಣವಾದ ಹಸಿರು ಮತ್ತು ಕೆಂಗಂದು ಬಣ್ಣದಿಂದ ಕಂಗೊಳಿಸಲಿದೆ.

ADVERTISEMENT

ಮೋಹನ್‌ ಬಾಗನ್ ತಂಡ 23 ವರ್ಷಗಳ ನಂತರ ಡ್ಯುರಾಂಡ್‌ ಕಪ್ ಗೆದ್ದುಕೊಂಡಿತ್ತು. ಐಎಸ್‌ಎಲ್‌ ಮಧ್ಯದ ಹಂತದಲ್ಲಿದ್ದಾಗ ತಂಡ ಐದನೇ ಸ್ಥಾನದಲ್ಲಿತ್ತು. ಜುವಾನ್‌ ಫರ್ನಾಂಡೊ ಬದಲಿಗೆ ಅಂಟೊನಿಯಾ ಹಬಾಸ್ ಅವರು ಕೋಚ್‌ ಆದ ಮೇಲೆ ತಂಡ ಹಿಂತಿರುಗಿ ನೋಡಲಿಲ್ಲ. ಪ್ರಪ್ರಥಮ ಬಾರಿ ಐಎಸ್‌ಎಲ್‌ ಲೀಗ್‌ ವಿಜೇತರ ಫಲಕ ಗೆದ್ದುಕೊಂಡಿತು.

ಆ ಪಂದ್ಯದಲ್ಲಿ ಮುಂಬೈ ಸಿಟಿ ತಂಡವನ್ನು 2–1 ಗೋಲುಗಳಿಂದ ಸೋಲಿಸಿದ ಎರಡು ವಾರಗಳ ನಂತರ ಇವೆರಡು ತಂಡಗಳು ಮತ್ತೆ ಮುಖಾಮುಖಿ ಆಗಲಿವೆ. 

ಮೂರು ವರ್ಷಗಳ ಹಿಂದೆ, ಕೊರೊನಾ ಸಾಂಕ್ರಾಮಿಕದ ಕಾರಣ ಮಡಗಾಂವ್‌ನಲ್ಲಿ ಪ್ರೇಕ್ಷಕರಿಗೆ ನಿರ್ಬಂಧದ ನಡುವೆ ನಡೆದ ಪಂದ್ಯದಲ್ಲಿ ಬಾಗನ್ ತಂಡ  ಇದೇ ಎದುರಾಳಿ ವಿರುದ್ಧ 1–0 ಮುನ್ನಡೆ ಪಡೆದಿದ್ದರೂ, ಅಂತಿಮವಾ 1–2 ಸೋಲನುಭವಿಸಿತ್ತು.

ಆದರೆ ಹಬಾಸ್ ಅವರು ಸೇಡಿನ ವಿಷಯ ತಲೆಯಲ್ಲಿಲ್ಲ ಎಂದು ಸೂಚ್ಯವಾಗಿ ಹೇಳಿದರು. ‘ಸೇಡಿನ ವಿಷಯ ಮನಸ್ಸಿನಲ್ಲಿಲ್ಲ. ಅದನ್ನು ಸಿನಿಯಾ ಅಥವಾ ಭೂಗತ ಲೋಕದಲ್ಲಿ ಕಾಣಬಹುದು. ಇದು ಪ್ರಬಲ ಎದುರಾಳಿ ವಿರುದ್ಧ ಇನ್ನೊಂದು ಪಂದ್ಯವಷ್ಟೇ’ ಎಂದು ಹೇಲಿದರು.

ಮುಂಬೈ ಸಿಟಿ ತಂಡ ಯಶಸ್ಸಿಗಾಗಿ ವಿಕ್ರಮ್ ಪ್ರತಾಪ್ ಸಿಂಗ್ ಮತ್ತು ಲಾಲಿಯನ್ಜುವಾಲಾ ಚಾಂಗ್ಟೆ ಅವರ ಆಟವನ್ನು  ನೆಚ್ಚಿಕೊಂಡಿದೆ.

ದೈಹಿಕ ಕ್ಷಮತೆ ಪಡೆದು ತಂಡಕ್ಕೆ ಮರಳಿರುವ ರಾಷ್ಟ್ರೀಯ ತಂಡದ ಮಿಡ್‌ಫೀಲ್ಡರ್‌ ಸಾಹಲ್ ಅಬ್ದುಲ್ ಸಮದ್ ಅವರಿಂದ ಬಾಗನ್ ತಂಡ ಬಲಗೊಂಡಿದೆ. ಸೆಮಿಫೈನಲ್‌ನಲ್ಲಿ ಅವರು ಬದಲಿಯಾಗಿ ಬಂದು ಒಡಿಶಾ ಎಫ್‌ಸಿ ವಿರುದ್ಧ ನಿರ್ಣಾಯಕ ಗೋಲು ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.