2023ರ ಫುಟ್ಬಾಲ್ ವಿಶ್ವಕಪ್ ಗೆಲ್ಲಲು ಮಾಂತ್ರಿಕ ಆಟಗಾರ ಲಿಯೋನೆಲ್ ಮೆಸ್ಸಿ ಇದ್ದರೂ ಅರ್ಜೆಂಟೀನಾಗೆ ಗೆಲುವು ಎಷ್ಟು ದುಬಾರಿ ಎಂದು ತೋರಿಸಿಕೊಟ್ಟ ಫ್ರಾನ್ಸ್ ಕಿಲಿಯನ್ ಎಂಬಾಪೆ, ಅತಿ ಹೆಚ್ಚಿನ ವೇತನ ಪಡೆಯುತ್ತಿರುವ ಆಟಗಾರರಲ್ಲೊಬ್ಬ.
ಬರುತ್ತಿರುವ ಭಾರೀ ಮೊತ್ತದ ವೇತನವನ್ನು ಎಂಬಾಪೆ ಖರ್ಚು ಮಾಡುತ್ತಿರುವುದಾದರೂ ಹೇಗೆ ಎಂಬುದಕ್ಕೆ ಇಲ್ಲಿದೆ ಒಂದಷ್ಟು ಮಾಹಿತಿ
ಜಗತ್ತಿನ ಸರ್ವಶ್ರೇಷ್ಠ ಫುಟ್‌ಬಾಲ್ ಆಟಗಾರರಲ್ಲೊಬ್ಬರಾದ 24 ವರ್ಷದ ಕಿಲಿಯನ್ ಎಂಬಾಪೆಯ ವಾರ್ಷಿಕ ವೇತನ ₹592 ಕೋಟಿ. ಹಾಗಿದ್ದರೆ ಅದನ್ನು ಎಂಬಾಪೆ ಯಾವುದಕ್ಕೆಲ್ಲಾ ಖರ್ಚು ಮಾಡುತ್ತಿದ್ದಾರೆ...?
ಎಂಬಾಪೆ ಫ್ರಾನ್ಸ್‌ನ ವಿಲಾಸಿ ಪರ್ಷಿಯನ್ ಸಬ್‌ಅರ್ಬ್‌ನಲ್ಲಿ ಬೆಳೆದವರು. ವಿಲಾಸಿ ಮನೆಗಳಿಗೆ ಈ ಪ್ರದೇಶ ಹೆಸರುವಾಸಿ. ಆದರೆ ಅವರ ಆದಾಯಕ್ಕೆ ತಕ್ಕಂತೆ ಅವರು ಈಗ ತಮ್ಮ ಮನೆಯನ್ನು ಮತ್ತಷ್ಟು ಆಸ್ಥೆಯಿಂದ ಸುಂದರಗೊಳಿಸಿದ್ದಾರೆ. ದಿ ಸನ್ ಪತ್ರಿಕೆ ವರದಿಯಂತೆ ಎಂಬಾಪೆ ಮನೆ ಬೆಲೆ ಸುಮಾರು ₹82 ಕೋಟಿ.
ಎಂಬಾಪೆ ಅವರ ಬಹುಮಹಡಿ ಅಪಾರ್ಟ್‌ಮೆಂಟ್‌ನ ಕಿಟಕಿ ತೆರೆದರೆ ವಿಶ್ವ ಪ್ರಸಿದ್ದ ಐಫೆಲ್ ಗೋಪುರ ಕಾಣಿಸುವಂತಿದೆ.
ತನ್ನ ಆದಾಯದ ಬಹುದೊಡ್ಡ ಪಾಲನ್ನು ಮನೆಗಾಗಿ ಖರ್ಚು ಮಾಡುತ್ತೇನೆ ಎಂದಿರುವ ಎಂಬಾಪೆ, ನನ್ನ ಕುಟುಂಬಕ್ಕಾಗಿ ಇದು ಅತಿ ಮುಖ್ಯವಾದದ್ದು ಎಂದಿದ್ದಾರೆ.
ಎಂಬಾಪೆ ಮನೆಯಲ್ಲಿ ಏನುಂಟು ಏನಿಲ್ಲ... 12 ಶಯನಗೃಹ, ಒಂದು ಬಾಸ್ಕೆಟ್‌ಬಾಲ್ ಕೋರ್ಟ್, ಗ್ರಂಥಾಲಯ, ತುರ್ಕಿಷ್ ಸ್ನಾನಗೃಹ ಇನ್ನೂ ಹಲವು...
ಎಂಬಾಪೆ ತನ್ನ ಗಳಿಕೆಯನ್ನು ವಿನಿಯೋಗಿಸುವ ಸರಣಿ ಮುಂದುವರಿದಿದೆ. ಮನೆ ಹೊರತುಪಡಿಸಿದರೆ ತಮ್ಮ ಆದಾಯದ ಬಹುಪಾಲನ್ನು ಅವರು ವಿಲಾಸಿ ಕಾರುಗಳ ಖರೀದಿಗೆ ವಿನಿಯೋಗಿಸಿದ್ದಾರೆ. ಅವರ ಬಳಿ ದುಬಾರಿ ಕಾರುಗಳ ದೊಡ್ಡ ಸಂಗ್ರಹವೇ ಇದೆ. ಇದರಲ್ಲಿ ಹೊಚ್ಚ ಹೊಸ ಫೆರಾರಿ ಹೈಬ್ರಿಡ್ ಎಸ್ಎಫ್ 90 ಕೂಡಾ ಸೇರಿದೆ.
ಫೆರಾರಿ ಎಸ್‌ಎಫ್ 90 ಜತೆ ಮರ್ಸಿಡೀಸ್ V ಕ್ಲಾಸ್ ವ್ಯಾನ್, ಫೋಕ್ಸ್‌ವ್ಯಾಗನ್ ಮಲ್ಟಿವ್ಯಾನ್ ಹಾಗೂ ಫೆರಾರಿ 488 ಪಿಸ್ತಾ ಸೇರಿದಂತೆ ಇನ್ನೂ ಹಲವು ಇವೆ.
ಬಹುಕೋಟಿ ಡಾಲರ್ ಕಾರುಗಳ ಒಡೆಯನಾಗಿದ್ದರೂ ಎಂಬಾಪೆ ಬಳಿ ಚಾಲನಾ ಪರವಾನಗಿ ಇಲ್ಲ. ಕಾರು ಚಾಲನೆಯನ್ನು ಎಂಬಾಪೆ ಇನ್ನೂ ಕಲಿತಿಲ್ಲ. ಹೀಗಾಗಿ ಅವರು ಚಾಲಕನ ನೆರವು ಪಡೆಯುತ್ತಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ‘ಕಿರಿಯ ವಯಸ್ಸಿನಲ್ಲೇ ಯಶಸ್ಸು ದಕ್ಕಿದ್ದರಿಂದ ಕಳೆದುಕೊಂಡಿದ್ದೇ ಹೆಚ್ಚು. ಚಾಲನಾ ಪರವಾನಗಿ ಪಡೆಯುವಂತ ಸಣ್ಣ ಸಂಗತಿಯೂ ನನಗೆ ಸಾಧ್ಯವಾಗಲಿಲ್ಲ’ ಎಂದಿದ್ದಾರೆ ಎಂಬಾಪೆ.
‘ನನಗೀಗ ಸ್ವಾತಂತ್ರವೂ ಇದೆ. ಚಾಲನಾ ಪರವಾನಗಿ ಇಲ್ಲ ಎಂಬ ಕೊರತೆ ನನಗಿಲ್ಲ. ಏಕೆಂದರೆ ನನ್ನ ಕಾರುಗಳನ್ನು ಓಡಿಸಲು ಚಾಲಕರು ಇದ್ದಾರೆ. ಹೀಗಾಗಿ ಹೆಚ್ಚು ಆರಾಮವಾಗಿರಲು ಸಾಧ್ಯವಾಗಿದೆ’ ಎಂದು ಎಂಬಾಪೆ ಅದೇ ಸಂದರ್ಶನದಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.