ಹೈದರಾಬಾದ್: ಇಂಡಿಯನ್ ಸೂಪರ್ ಲೀಗ್ ಫ್ರಾಂಚೈಸ್ ಹೈದರಾಬಾದ್ ಎಫ್‌ಸಿ ಮುಖ್ಯ ಕೋಚ್ ಹುದ್ದೆಯನ್ನು ಫಿಲ್ ಬ್ರೌನ್ ತೊರೆದಿದ್ದಾರೆ. ಶನಿವಾರ, ಕ್ಲಬ್ ಒಪ್ಪಿಗೆ ಪಡೆದ ನಂತರ ಬ್ರೌನ್ ಈ ನಿರ್ಧಾರಕ್ಕೆ ಬಂದಿದ್ದಾರೆ.
ಈಋತುವಿನ ಆರಂಭದಲ್ಲಿ ಅವರು ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದರು.
‘ಕ್ಲಬ್‌ಗೆ ಸೇರ್ಪಡೆಯಾದ ನಂತರ ಫಿಲ್ ಅವರು ಪ್ರಯತ್ನಕ್ಕೆ ಕೃತಜ್ಞತೆ ಸಲ್ಲಿಸುತ್ತಿದ್ದೇವೆ. ನಮ್ಮ ಪದಾರ್ಪಣೆಋತುವಿನಲ್ಲಿ ಸವಾಲಿನ ಸಂದರ್ಭಗಳು ಎದುರಾದವು. ಫಿಲ್ ಮೆಚ್ಚುಗೆಯಾಗುವ ರೀತಿ ತಂಡವನ್ನು ಮುನ್ನಡೆಸಿದರು. ಅವರಿಗೆ ಶುಭ ಹಾರೈಸುತ್ತೇವೆ’ ಎಂದು ಹೈದರಾಬಾದ್ ಎಫ್‌ಸಿ ಸಹ ಮಾಲೀಕರಾದ ವರುಣ್ ತ್ರಿಪುರನೇನಿ ತಿಳಿಸಿದರು.
ಹೈದರಾಬಾದ್ ಎಫ್‌ಸಿ ತಂಡ ಸದ್ಯ 10 ತಂಡಗಳ ಲೀಗ್‌ನಲ್ಲಿ ತಳದಲ್ಲಿದೆ. 12 ಪಂದ್ಯಗಳಲ್ಲಿ ಒಂಬತ್ತನ್ನು ಸೋತಿದ್ದು, ಒಂದು ಗೆದ್ದು, ಎರಡನ್ನು ಡ್ರಾ ಮಾಡಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.