ADVERTISEMENT

ಇಂಡಿಪೆಂಡೆನ್ಸ್ ಕಪ್ ಫುಟ್‌ಬಾಲ್‌ ಟೂರ್ನಿ: ಎಂಟರ ಘಟ್ಟ ತಲುಪಿದ ಎನ್ಎಂಎಎಂ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2024, 15:48 IST
Last Updated 11 ಆಗಸ್ಟ್ 2024, 15:48 IST
<div class="paragraphs"><p>ಎಂ.ವಿ ಶೆಟ್ಟಿ&nbsp;ಇನ್‌ಸ್ಟಿಟೂಷನ್‌ (ಬಲ) ತಂಡದ ಆಟಗಾರನಿಂದ ಪಿ.ಎ ಕಾಲೇಜು ‘ಎ’ ತಂಡದ ಆಟಗಾರ ಚೆಂಡು ಕಸಿದುಕೊಳ್ಳಲು ಪ್ರಯತ್ನಿಸಿದ ಸಂದರ್ಭ </p></div>

ಎಂ.ವಿ ಶೆಟ್ಟಿ ಇನ್‌ಸ್ಟಿಟೂಷನ್‌ (ಬಲ) ತಂಡದ ಆಟಗಾರನಿಂದ ಪಿ.ಎ ಕಾಲೇಜು ‘ಎ’ ತಂಡದ ಆಟಗಾರ ಚೆಂಡು ಕಸಿದುಕೊಳ್ಳಲು ಪ್ರಯತ್ನಿಸಿದ ಸಂದರ್ಭ

   

– ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್

ಮಂಗಳೂರು: ಕಳೆದ ಬಾರಿಯ ರನ್ನರ್ ಅಪ್, ಮಡಂತ್ಯಾರ್‌ನ ಸೇಕ್ರೆಡ್ ಹಾರ್ಟ್ ಕಾಲೇಜು ತಂಡವನ್ನು ಮಣಿಸಿದ ಎನ್‌ಎಂಎಎಂ ತಾಂತ್ರಿಕ ಕಾಲೇಜು ಇಂಡಿಪೆಂಡೆನ್ಸ್ ಕಪ್ ಫುಟ್‌ಬಾಲ್ ಟೂರ್ನಿಯ ಎಂಟರ ಘಟ್ಟ ಪ್ರವೇಶಿಸಿತು.

ADVERTISEMENT

ಜಿಲ್ಲಾ ಫುಟ್‌ಬಾಲ್ ಸಂಸ್ಥೆ ನಗರದ ನೆಹರೂ ಮೈದಾನದಲ್ಲಿ ಆಯೋಜಿಸಿರುವ ಟೂರ್ನಿಯ ಭಾನುವಾರದ ಪಂದ್ಯದಲ್ಲಿ ಎನ್ಎಂಎಎಂ ಪೆನಾಲ್ಟಿ ಶೂಟೌಟ್‌ನಲ್ಲಿ ಸೇಕ್ರೆಡ್ ಹರ್ಟ್ ತಂಡವನ್ನು ಮಣಿಸಿತು. ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ತಲಾ ಒಂದೊಂದು ಗೋಲು ಗಳಿಸಿದ್ದವು. ಟೈಬ್ರೇಕರ್‌ನಲ್ಲಿ ಎನ್‌ಎಂಎಎಂ 4–2ರಲ್ಲಿ ಜಯಿಸಿತು.

ಯೆನೆಪೋಯ ‘ಎ’ ಮತ್ತು ‘ಬಿ’ ತಂಡಗಳು, ಪಿಎ ಕಾಲೇಜಿನ ‘ಎ’ ಮತ್ತು ‘ಬಿ’ ತಂಡಗಳು, ಟಿಪ್ಪು ಸುಲ್ತಾನ್ ಕಾಲೇಜು, ಮಂಗಳಾ ಇನ್‌ಸ್ಟಿಟ್ಯೂಷನ್ಸ್‌ ಮತ್ತು ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜು ಕೂಡ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.

ಯೆನೆಪೋಯ ‘ಎ’ ತಂಡ ಪದುವಾ ಕಾಲೇಜು ವಿರುದ್ಧ 5–0ಯಿಂದ ಜಯ ಗಳಿಸಿದರೆ ‘ಬಿ’ ತಂಡ ಎಸ್‌ಡಿಎಂ ಕಾಲೇಜು ಎದುರು 3–1ರಿಂದ ಗೆದ್ದಿತು. ಪಿಎ ಕಾಲೇಜು ‘ಎ’ ತಂಡ ಎಂ.ವಿ.ಶೆಟ್ಟಿ ಇನ್‌ಸ್ಟಿಟ್ಯೂಷನ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ (3–1), ‘ಬಿ’ ತಂಡ ಶ್ರೀನಿವಾಸ ಕ್ಯಾಂಪಸ್ ವಿರುದ್ಧ 1–0ಯಿಂದ ಗೆಲುವು ಸಾಧಿಸಿತು. ಸಹ್ಯಾದ್ರಿ ಕಾಲೇಜು 4–1ರಿಂದ ಬದ್ರಿಯಾ ಪ್ರಥಮ ದರ್ಜೆ ಕಾಲೇಜನ್ನು, ಟಿಪ್ಪು ಸುಲ್ತಾನ್ ಕಾಲೇಜು 3–0ಯಿಂದ ಎಜೆ ವೈದ್ಯಕೀಯ ಕಾಲೇಜನ್ನು, ಮಂಗಳಾ ಇನ್‌ಸ್ಟಿಟ್ಯೂಷನ್ ‘ಎ’ ತಂಡ 1–0ಯಿಂದ ಮಿಲಾಗ್ರಿಸ್ ಕಾಲೇಜನ್ನು ಮಣಿಸಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.