ADVERTISEMENT

ಮಹಿಳಾ ಫುಟ್‌ಬಾಲ್‌ ಬೆಳವಣಿಗೆಗೆ ಒತ್ತು: ಭಾರತದಲ್ಲಿ ನಡೆಯಲಿದೆ 2022ರ ಏಷ್ಯಾಕಪ್

ಪಿಟಿಐ
Published 19 ಫೆಬ್ರುವರಿ 2020, 12:33 IST
Last Updated 19 ಫೆಬ್ರುವರಿ 2020, 12:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕ್ವಾಲಾಲಂಪುರ:2022ರಲ್ಲಿ ನಡೆಯಲಿರುವ ಎಎಫ್‌ಸಿ(ಏಷ್ಯನ್ ಫುಟ್‌ಬಾಲ್‌ ಒಕ್ಕೂಟ) ಮಹಿಳೆಯರ ಏಷ್ಯಾಕಪ್ ಫುಟ್‌ಬಾಲ್ ಟೂರ್ನಿಯ ಆತಿಥ್ಯವನ್ನು ಭಾರತ ವಹಿಸಲಿದೆ. ದೇಶದಲ್ಲಿ ಮಹಿಳಾ ಫುಟ್‌ಬಾಲ್‌ ಬೆಳವಣಿಗೆಗೆ ನೆರವಾಗುವ ದೃಷ್ಟಿಯಿಂದಎಎಫ್‌ಸಿ ನಿರ್ಧಾರ ಕೈಗೊಂಡಿದೆ.

ಫೀಫಾ 17 ವರ್ಷದೊಳಗಿನ ಮಹಿಳೆಯರ ಫುಟ್‌ಬಾಲ್‌ ವಿಶ್ವಕಪ್‌ ಟೂರ್ನಿಗೆ ಭಾರತ ಇದೇ ವರ್ಷಾಂತ್ಯದಲ್ಲಿ ಆತಿಥ್ಯ ವಹಿಸಲಿದೆ. ಹೀಗಾಗಿ ಏಷ್ಯಾಕಪ್ ಆಯೋಜಿಸಲು ಭಾರತವೇ ಸೂಕ್ತ ಎಂದು ಎಎಫ್‌ಸಿ ತೀರ್ಮಾನಿಸಿದೆ.

ಡಿ.ವೈ.ಪಾಟೀಲ ಕ್ರೀಡಾಂಗಣ, ಟ್ರಾನ್ಸ್ ಸ್ಟೇಡಿಯಾ ಅರೇನಾ ಮತ್ತು ಫತೋರ್ಡಾ ಕ್ರೀಡಾಂಗಣಗಳಲ್ಲಿಏಷ್ಯಾಕಪ್‌ ಪಂದ್ಯಗಳನ್ನು ಆಯೋಜಿಸುವುದಾಗಿ ಭಾರತ ಹೇಳಿದೆ ಎಂದುಎಎಫ್‌ಸಿ ತಿಳಿಸಿದೆ. ಈ ಕ್ರೀಡಾಂಗಣಗಳಲ್ಲಿಯೇ17 ವರ್ಷದೊಳಗಿನವರವಿಶ್ವಕಪ್‌ ಪಂದ್ಯಗಳೂ ನಡೆಯಲಿವೆ.

ADVERTISEMENT

ಎಎಫ್‌ಸಿ ಮಹಿಳಾ ಸಮಿತಿಯ ಮುಖ್ಯಸ್ಥರಾದ ಮಹ್ಫುಜಾ ಅಖ್ತರ್‌ ಕಿರೊನ್‌, ‘ಕ್ರೀಡೆಯ ಮೌಲ್ಯ, ವಾಣಿಜ್ಯ ಅಭಿವೃದ್ಧಿಗೆಅತ್ಯುತ್ತಮ ಅವಕಾಶಗಳನ್ನು ಕಲ್ಪಿಸುವುದಾಗಿ ಮತ್ತುಮಹಿಳಾ ಫುಟ್‌ಬಾಲ್‌ ಬೆಳವಣಿಗೆಗೆ ಬದ್ಥವಾಗಿರುವುದಾಗಿ ಭಾರತ ಹೇಳಿದೆ’ ಎಂದು ತಿಳಿಸಿದ್ದಾರೆ.

ಏಷ್ಯಾಕಪ್ ಆತಿಥ್ಯಕ್ಕಾಗಿಚೀನಾ ತೈಪೆ ಮತ್ತು ಉಜ್ಬೆಕಿಸ್ತಾನ ದೇಶಗಳೂ ಬಿಡ್ ಮಾಡಿದ್ದವು.

ಎಎಫ್‌ಸಿಯ 16 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ ಹಾಗೂ 17 ವರ್ಷದೊಳಗಿನವರ ಫಿಫಾ ವಿಶ್ವಕಪ್ ಟೂರ್ನಿಗಳು ಕ್ರಮವಾಗಿ 2016 ಮತ್ತು 2017ರಲ್ಲಿ ಭಾರತದಲ್ಲೇ ಆಯೋಜನೆಯಾಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.