ಅಬುಧಾಬಿ: ಎಎಫ್‌ಸಿ ಏಷ್ಯಾಕಪ್‌ನಲ್ಲಿ ಭಾಗವಹಿಸಲಿರುವ ಭಾರತ ತಂಡದವರು ಗುರುವಾರ ಅಬುಧಾಬಿ ತಲುಪಿದ್ದಾರೆ.
ಭಾರತ ತಂಡ ಟೂರ್ನಿಯಲ್ಲಿ ‘ಎ’ ಗುಂಪಿನಲ್ಲಿ ಆಡಲಿದೆ. ಜನವರಿ 6ರಂದು ನಡೆಯುವ ತನ್ನ ಮೊದಲ ಹೋರಾಟದಲ್ಲಿ ಥಾಯ್ಲೆಂಡ್ ಎದುರು ಸೆಣಸಲಿದೆ. ನಂತರ ಆತಿಥೇಯ ಯುಎಇ (ಜ.10) ಮತ್ತು ಬಹ್ರೇನ್ (ಜ.14) ತಂಡಗಳ ವಿರುದ್ಧ ಆಡಲಿದೆ.
ಟೂರ್ನಿಗೂ ಮುನ್ನ ಭಾರತ ತಂಡದವರು ಒಮನ್ ಎದುರು ಸೌಹಾರ್ದ ಪಂದ್ಯ ಆಡಲಿದ್ದಾರೆ. ಈ ಹಣಾಹಣಿ ಡಿಸೆಂಬರ್ 27ರಂದು ನಿಗದಿಯಾಗಿದೆ.
ತಂಡ ಇಂತಿದೆ: ಗೋಲ್‌ಕೀಪರ್‌ಗಳು: ಗುರುಪ್ರೀತ್ ಸಿಂಗ್ ಸಂಧು, ಅಮರಿಂದರ್ ಸಿಂಗ್, ಅರಿಂದಮ್ ಭಟ್ಟಾಚಾರ್ಯ ಮತ್ತು ವಿಶಾಲ್ ಕೇತ್.
ಡಿಫೆಂಡರ್‌ಗಳು: ಪ್ರೀತಮ್ ಕೋಟಾಲ್, ಲಾಲ್ರುಥಾರ, ಸಂದೇಶ್ ಜಿಂಗಾನ್, ಅನಾಸ್ ಎಡತೋಡಿಕಾ, ಸಲಾಂ ರಂಜನ್ ಸಿಂಗ್, ಸಾರ್ಥಕ್ ಗೊಲುಯಿ, ಸುಭಾಶಿಶ್ ಬೋಸ್ ಮತ್ತು ನಾರಾಯಣ ದಾಸ್.
ಮಿಡ್‌ಫೀಲ್ಡರ್‌ಗಳು: ಉದಾಂತ ಸಿಂಗ್, ಜಾಕಿಚಂದ್ ಸಿಂಗ್, ಪ್ರಣಯ್ ಹಲ್ದಾರ್, ವಿನೀತ್ ರಾಯ್, ರೌಲಿನ್ ಬೋರ್ಗೆಸ್, ಅನಿರುದ್ಧ್ ಥಾಪಾ, ಜರ್ಮನ್ ಪಿ.ಸಿಂಗ್, ಆಶಿಕ್ ಕುರಿನಿಯನ್, ಹಾಲಿಚರಣ್ ನರ್ಜರಿ, ಲಾಲಿಂಜುವಾಲಾ ಚಾಂಗ್ಟೆ.
ಫಾರ್ವರ್ಡ್‌ಗಳು: ಸುನಿಲ್ ಚೆಟ್ರಿ, ಜೆಜೆ ಲಾಲ್‌ಪೆಕ್ಲುವಾ, ಬಲವಂತ್ ಸಿಂಗ್, ಮನ್ವೀರ್ ಸಿಂಗ್, ಫಾರುಖ್ ಚೌಧರಿ ಮತ್ತು ಸುಮೀತ್ ಪಸ್ಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.