ADVERTISEMENT

ಸ್ನೇಹಪರ ಫುಟ್‌ಬಾಲ್‌: ಜೋರ್ಡಾನ್‌ಗೆ ಮಣಿದ ಭಾರತ

ಪಿಟಿಐ
Published 29 ಮೇ 2022, 13:22 IST
Last Updated 29 ಮೇ 2022, 13:22 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ದೋಹಾ: ಆರು ತಿಂಗಳ ಬಳಿಕ ಸುನಿಲ್ ಚೆಟ್ರಿ ಮರಳಿದ ಪಂದ್ಯದಲ್ಲಿ ಭಾರತ ಫುಟ್‌ಬಾಲ್ ತಂಡಕ್ಕೆ ಗೆಲುವು ಒಲಿಯಲಿಲ್ಲ.

ಶನಿವಾರ ಇಲ್ಲಿ ನಡೆದ ಅಂತರರಾಷ್ಟ್ರೀಯ ಸ್ನೇಹಪರ ಪಂದ್ಯದಲ್ಲಿ ಭಾರತ ತಂಡವು 0–2ರಿಂದ ಜೋರ್ಡಾನ್ ಎದುರು ಸೋಲನುಭವಿಸಿತು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 91ನೇ ಸ್ಥಾನದಲ್ಲಿರುವ ಜೋರ್ಡಾನ್ ತಂಡದ ಪರ ಮೋಂಥರ್ ಅಬು ಅಮಾರ (75ನೇ ನಿಮಿಷ) ಮತ್ತು ಅಬು ಜ್ರೇಕ್‌ (90+4ನೇ ನಿಮಿಷ) ಕಾಲ್ಚಳಕ ತೋರಿದರು. 106ನೇ ರ‍್ಯಾಂಕಿನ ಭಾರತಕ್ಕೆ ಚೆಂಡನ್ನು ಒಮ್ಮೆಯೂ ಗುರಿಯತ್ತ ಸಾಗಿಸಲು ಸಾಧ್ಯವಾಗಲಿಲ್ಲ.

ADVERTISEMENT

ಜೂನ್ 8ರಂದು ಕೋಲ್ಕತ್ತದಲ್ಲಿ ನಡೆಯುವ2023ರ ಎಎಫ್‌ಸಿ ಏಷ್ಯಾಕಪ್ ಟೂರ್ನಿಯ ಅರ್ಹತಾ ಪಂದ್ಯದಲ್ಲಿ ಭಾರತ ತಂಡವು ಕಾಂಬೋಡಿಯಾವನ್ನು ಎದುರಿಸಲಿದೆ.

37 ವರ್ಷದ ಚೆಟ್ರಿ, ಹೋದ ವರ್ಷ ಅಕ್ಟೋಬರ್‌ನಲ್ಲಿ ಸ್ಯಾಫ್ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ನೇಪಾಳ ತಂಡದ ಎದುರು ಕೊನೆಯ ಪಂದ್ಯ ಆಡಿದ್ದರು. ಆ ಪಂದ್ಯದಲ್ಲಿ ಭಾರತ 3–0ಯಿಂದ ಜಯ ಸಾಧಿಸಿತ್ತು. ಆ ಬಳಿಕ ಗಾಯದ ಕಾರಣ ಕಣಕ್ಕಿಳಿದಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.