ADVERTISEMENT

ಸ್ಯಾಫ್‌: ನೇಪಾಳಕ್ಕೆ ಮಣಿದ ಭಾರತ

ಪಿಟಿಐ
Published 27 ಅಕ್ಟೋಬರ್ 2024, 19:48 IST
Last Updated 27 ಅಕ್ಟೋಬರ್ 2024, 19:48 IST
<div class="paragraphs"><p>ಫುಟ್‌ಬಾಲ್‌</p></div>

ಫುಟ್‌ಬಾಲ್‌

   

ಕಠ್ಮಂಡು (ಪಿಟಿಐ): ಐದು ಬಾರಿಯ ಚಾಂಪಿಯನ್‌ ಭಾರತ ತಂಡವು ಭಾನುವಾರ ಸ್ಯಾಫ್‌ ಮಹಿಳಾ ಫುಟ್‌ಬಾಲ್‌ ಚಾಂಪಿಯಪ್‌ಷಿಪ್‌ನ ಸೆಮಿಫೈನಲ್‌ನಲ್ಲಿ ನೇಪಾಳ ವಿರುದ್ಧ ಪರಾಭವಗೊಂಡಿತು. ಇದಕ್ಕೂ ಮೊದಲು ರೆಫರಿ ನಿರ್ಧಾರವನ್ನು ವಿರೋಧಿಸಿ ಆತಿಥೇಯ ತಂಡವು ಒಂದು ಗಂಟೆಗೂ ಹೆಚ್ಚು ಕಾಲ ಪ್ರತಿಭಟಿಸಿದ ಘಟನೆಯೂ ನಡೆಯಿತು.

ಆಶಾಲತಾ ದೇವಿ ನಾಯಕತ್ವದ ಭಾರತ ತಂಡವು ಪೆನಾಲ್ಟಿ ಶೂಟೌಟ್‌ನಲ್ಲಿ 2–4ರಿಂದ ನೇಪಾಳಕ್ಕೆ ಮಣಿಯಿತು. ಫೈನಲ್‌ನಲ್ಲಿ ಆತಿಥೇಯ ತಂಡವು ಬಾಂಗ್ಲಾದೇಶವನ್ನು ಎದುರಿಸಲಿದೆ. ಮತ್ತೊಂದು ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ 7–1ರಿಂದ ಭೂತಾನ್‌ ತಂಡವನ್ನು ಮಣಿಸಿತು. 

ADVERTISEMENT

ಇಲ್ಲಿನ ದಶರಥ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ನಿಗದಿತ ಅವಧಿಯಲ್ಲಿ 1–1 ಗೋಲುಗಳಿಂದ ಸಮಬಲಗೊಂಡಿತ್ತು. 62ನೇ ನಿಮಿಷದಲ್ಲಿ ಬಾಕ್ಸ್‌ನ ಹೊರಗಿನಿಂದ ಸಂಗೀತಾ ಬಾಸ್ಫೋರ್ ಅವರು ಅದ್ಭುತ ಕಾಲ್ಚಳಕದ ಮೂಲಕ ಭಾರತಕ್ಕೆ ಮುನ್ನಡೆ ಒದಗಿಸಿದರು.

ಅದರ ಬೆನ್ನಲ್ಲೇ ನೇಪಾಳ ಗೋಲು ಗಳಿಸಿತು. ಆದರೆ, ರೆಫರಿ ಗೋಲನ್ನು ನಿರಾಕರಿಸಿದರು. ಹೀಗಾಗಿ, ಆತಿಥೇಯ ತಂಡದ ಆಟಗಾರ್ತಿಯರು ರೆಫರಿಯ ನಿರ್ಧಾರವನ್ನು ಪ್ರತಿಭಟಿಸಿ ಆಟವನ್ನು ಮುಂದುವರಿಯಲು ನಿರಾಕರಿಸಿದರು. ಹೀಗಾಗಿ, ಪಂದ್ಯವನ್ನು 70 ನಿಮಿಷಗಳ ಕಾಲ ತಡೆಹಿಡಿಯಲಾಯಿತು.

ಮೇಲ್ವಿಚಾರಣಾ ಅಧಿಕಾರಿಗಳು ಮತ್ತು ನೇಪಾಳ ತಂಡದ ನಡುವೆ ಸಾಕಷ್ಟು ಚರ್ಚೆಯ ನಂತರ ಪಂದ್ಯ ಪುನರಾರಂಭವಾಯಿತು. ಅದಾದ ಕೆಲವೇ ಸೆಕೆಂಡ್‌ನಲ್ಲಿ ನೇಪಾಳದ ಸಬಿತ್ರಾ ಭಂಡಾರಿ ಚೆಂಡನ್ನು ಗುರಿ ಸೇರಿಸಿದ್ದರಿಂದ ತಂಡಗಳ ಸ್ಕೋರ್‌ ಸಮಬಲಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.