ADVERTISEMENT

ಏಷ್ಯಾಕಪ್ ಫುಟ್‌ಬಾಲ್‌: ಭಾರತ ಹೊರಕ್ಕೆ

ಪಿಟಿಐ
Published 14 ಜನವರಿ 2019, 19:30 IST
Last Updated 14 ಜನವರಿ 2019, 19:30 IST
   

ಶಾರ್ಜಾ: ಹೆಚ್ಚುವರಿ ಅವಧಿಯಲ್ಲಿ ಎದುರಾಳಿಗಳಿಗೆ ಗೋಲು ಬಿಟ್ಟುಕೊಟ್ಟ ಭಾರತ ತಂಡ ಎಎಫ್‌ಸಿ ಏಷ್ಯಾ ಕಪ್ ಫುಟ್‌ಬಾಲ್ ಟೂರ್ನಿಯ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಸೋತು ಹೊರ ಬಿದ್ದಿತು. ಸೋಮವಾರ ರಾತ್ರಿ ಇಲ್ಲಿ ನಡೆದ ಪಂದ್ಯದಲ್ಲಿ ಬಹರೇನ್‌ 1–0ಯಿಂದ ಭಾರತವನ್ನು ಮಣಿಸಿತು.

ಕೊನೆಯ ನಿಮಿಷದ ವರೆಗೂ ಕಾದಾಡಿದ ಭಾರತ ತಂಡ ಡ್ರಾ ಸಾಧಿಸಿ ನೌಕೌಟ್ ಹಂತದ ಕನಸು ಜೀವಂತವಾಗಿರಿಸಿಕೊಳ್ಳುವ ಭರವಸೆಯಲ್ಲಿತ್ತು. ಆದರೆ 91ನೇ ನಿಮಿಷದಲ್ಲಿ ಪ್ರಣಯ್ ಹಲ್ದರ್ ಎಸಗಿದ ಪ್ರಮಾದ ತಂಡಕ್ಕೆ ಮುಳುವಾಯಿತು. ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಜಮಾಲ್ ರಶೀದ್‌ ಬಹರೇನ್ ತಂಡದಲ್ಲಿ ಸಂಭ್ರಮ ಮೂಡಿಸಿದರು.

ಎರಡನೇ ನಿಮಿಷದಲ್ಲಿ ಅನಾಸ್ ಎಡತೋಡಿಕ ಗಾಯಗೊಂಡು ಮರಳಿದಾಗ ಭಾರತ ಮೊದಲ ಆಘಾತ ಅನುಭವಿಸಿತ್ತು. ಆದರೂ ಪಂದ್ಯದ ಪೂರ್ಣಾವಧಿಯ ವರೆಗೆ ಎದುರಾಳಿಗಳ ಆಕ್ರಮಣವನ್ನು ಮೀರಿ ನಿಲ್ಲಲು ತಂಡಕ್ಕೆ ಸಾಧ್ಯವಾಗಿತ್ತು.

ADVERTISEMENT

ಮೊದಲ ಪಂದ್ಯದಲ್ಲಿ ಥಾಯ್ಲೆಂಡ್ ಎದುರು 4–1ರಿಂದ ಗೆದ್ದಿದ್ದ ಭಾರತ ನಂತರ ಯುಎಇ ವಿರುದ್ಧ 0–2ರಿಂದ ಸೋತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.