ADVERTISEMENT

ಸ್ಯಾಫ್‌ ಮಹಿಳಾ ಫುಟ್‌ಬಾಲ್‌: ಭಾರತಕ್ಕೆ ಮಣಿದ ಪಾಕ್

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 16:19 IST
Last Updated 17 ಅಕ್ಟೋಬರ್ 2024, 16:19 IST
   

ಕಠ್ಮಂಡು: ಭಾರತ ತಂಡ, ಸ್ಯಾಫ್‌ ಮಹಿಳೆಯರ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ ‘ಎ’ ಗುಂಪಿನ ಪಂದ್ಯದಲ್ಲಿ ಗುರುವಾರ ಪಾಕಿಸ್ತಾನ ತಂಡವನ್ನು 5–2 ಗೋಲುಗಳಿಂದ ಸೋಲಿಸಿ ತನ್ನ ಅಭಿಯಾನವನ್ನು ಭರ್ಜರಿಯಾಗಿ ಆರಂಭಿಸಿತು.

ದಶರಥ ಕ್ರೀಡಾಂಗಣದಲ್ಲಿ ಸಾಂಪ್ರದಾಯಿಕ  ಎದುರಾಳಿಗಳ ನಡುವೆ ನಡೆದ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ತಂಡ ವಿರಾಮದ ವೇಳೆಗೆ 4–1 ಗೋಲುಗಳಿಂದ ಮುಂದಿತ್ತು. ಗ್ರೇಸ್‌ ಡಾಂಗ್‌ಮೀ (ಎರಡು ಗೋಲು), ಮನಿಷಾ, ಬಾಲಾ ದೇವಿ, ಜ್ಯೋತಿ ಚೌಹಾನ್‌ ಭಾರತ ಪರ ಗೋಲು ಗಳಿಸಿದರು. ಸುಹಾ ಹಿರಾನಿ ಮತ್ತು ಕಯ್ಲಾ ಮೇರಿ ಸಿದ್ಧೀಖ್ ಪಾಕ್ ಪರ ಚೆಂಡನ್ನು ಗುರಿತಲುಪಿಸಿದರು.

ಭಾರತ ತಂಡದ ಆಟಗಾರ್ತಿ ಆಶಾಲತಾ ದೇವಿ ಅವರಿಗೆ ಇದು ನೂರನೇ ಪಂದ್ಯವೆನಿಸಿತು. ಗಂಗೊಮ್‌ ಬಾಲಾ ದೇವಿ ಅವರು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 50 ಗೋಲುಗಳನ್ನು ಪೂರೈಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.