ADVERTISEMENT

ಆಟಗಾರರ ಆಯ್ಕೆಗೆ ಜ್ಯೋತಿಷಿ ಸಲಹೆ: ಸ್ಟಿಮಾಚ್‌ ವಿರುದ್ಧ ಎಎಫ್ಎ ಆರೋಪ

ಏಜೆನ್ಸೀಸ್
Published 25 ಜೂನ್ 2024, 13:22 IST
Last Updated 25 ಜೂನ್ 2024, 13:22 IST
ಇಗೊರ್ ಸ್ಟಿಮಾಚ್
ಇಗೊರ್ ಸ್ಟಿಮಾಚ್   

ನವದೆಹಲಿ: ಭಾರತ ತಂಡ ವಿಶ್ವಕಪ್ ಅರ್ಹತಾ ಸುತ್ತಿನ ಮೂರನೇ ಸುತ್ತಿಗೆ ತಲುಪಲು ವಿಫಲವಾದ ಕಾರಣ ಕೋಚ್‌ ಸ್ಥಾನದಿಂದ ಪದಚ್ಯುತಗೊಂಡಿರುವ ಇಗೊರ್ ಸ್ಟಿಮಾಚ್‌ ಅವರು ಆಟಗಾರರನ್ನು ಆಯ್ಕೆ ಮಾಡಲು ಜ್ಯೋತಿಷಿ ಸಲಹೆ ಪಡೆದಿದ್ದರು ಎಂದು ಭಾರತ ಫುಟ್‌ಬಾಲ್ ಫೆಡರೇಷನ್ ಆರೋಪಿಸಿದೆ.

ಐದು ವರ್ಷಗಳ ಅಧಿಕಾರಾವಧಿಯಲ್ಲಿ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್ಎಫ್) ಜೊತೆಗೆ ಸ್ಟಿಮಾಚ್‌ ಉತ್ತಮ ಸಂಬಂಧವನ್ನು ಹೊಂದಿರಲಿಲ್ಲ.    

ನಕಾರಾತ್ಮಕ ಹೇಳಿಕೆಗಳಿಂದ ಸ್ಟಿಮಾಚ್ ಫುಟ್‌ಬಾಲ್ ಸಂಸ್ಥೆಯ ಘನತೆಗೆ ಚ್ಯುತಿ ತಂದಿದ್ದಾರೆ ಎಂದು ಎಐಎಫ್ಎಫ್  ಪ್ರತಿಕ್ರಿಯಿಸಿದೆ.

ADVERTISEMENT

2023 ರಲ್ಲಿ ಮಾಧ್ಯಮ ವರದಿಯೊಂದು ಭಾರತ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡಲು ಸ್ಟಿಮಾಚ್ ಅವರು ಜ್ಯೋತಿಷಿ ಮೊರೆ ಹೋಗಿದ್ದರು ಎಂದು ಹೇಳಿತ್ತು. ಆಗ ಸ್ಟಿಮಾಚ್‌ ಆ ಹೇಳಿಕೆಯನ್ನು ‘ನಾಚಿಕೆಗೇಡು’ ಎಂದು ಟೀಕಿಸಿದ್ದರು. 

ಸ್ಟಿಮಾಚ್‌ ಮಾರ್ಗದರ್ಶನದಡಿ ಭಾರತ ಎರಡು ಸ್ಯಾಫ್‌ ಚಾಂಪಿಯನ್‌ಷಿಪ್‌, ಒಮ್ಮೆ ಇಂಟರ್‌ಕಾಂಟಿನೆಂಟಲ್ ಕಪ್ ಮತ್ತು ಮೂರು ರಾಷ್ಟ್ರಗಳ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. 

1998ರ ವಿಶ್ವಕಪ್‌ನ ಸೆಮಿಫೈನಲ್ ತಲುಪಿದ್ದ ಕ್ರೊವೇಷಿಯಾ ತಂಡದಲ್ಲಿ ಸ್ಟಿಮಾಚ್‌ ಆಡಿದ್ದರು. 

2019ರಲ್ಲಿ ಅವರನ್ನು ಕೋಚ್ ಆಗಿ ನೇಮಕ ಮಾಡಲಾಗಿತ್ತು. ಅವರ ಗುತ್ತಿಗೆ ಅವಧಿ ಮುಗಿಯಲು ಸರಿಯಾಗಿ ಒಂದು ವರ್ಷ ಉಳಿದಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.