ಕೋಲ್ಕತ್ತ: ಚೆನ್ನೈಯಿನ್ ಎಫ್‌ಸಿ ತಂಡ ಐಎಸ್‌ಎಲ್ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ 2–1 ಗೋಲುಗಳಿಂದ ಎಟಿಕೆ ಮೋಹನ್ ಬಾಗನ್ ತಂಡವನ್ನು ಮಣಿಸಿತು.
ಸೋಮವಾರ ನಡೆದ ಪಂದ್ಯದಲ್ಲಿ ಒಂದು ಗೋಲಿನ ಹಿನ್ನಡೆಯಲ್ಲಿದ್ದ ಚೆನ್ನೈಯಿನ್ ಮರುಹೋರಾಟ ನಡೆಸುವಲ್ಲಿ ಯಶಸ್ವಿಯಾಯಿತು.
ಮನ್ವೀರ್ ಸಿಂಗ್ ಅವರು 27ನೇ ನಿಮಿಷದಲ್ಲಿ ಮೋಹನ್ ಬಾಗನ್‌ಗೆ ಮುನ್ನಡೆ ತಂದಿತ್ತರು. ಕ್ವಾಮಿ ಕರೈಕರಿ (64ನೇ ನಿ.) ಮತ್ತು ರಹೀಂ ಅಲಿ (83) ಅವರು ಗೋಲು ಗಳಿಸಿ ಚೆನ್ನೈಯಿನ್ ಗೆಲುವಿಗೆ ಕಾರಣರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.