ಬೆಂಗಳೂರು: ಬೆಂಗಳೂರು ಎಫ್‌ಸಿ ತಂಡ ದವರು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿ ಯಲ್ಲಿ ಶನಿವಾರ ಕೇರಳ ಬ್ಲಾಸ್ಟರ್ಸ್ ತಂಡದ ಸವಾಲು ಎದುರಿಸಲಿದ್ದಾರೆ.
‘ಪ್ಲೇ ಆಫ್‘ನಲ್ಲಿ ಸ್ಥಾನ ಖಚಿತಪಡಿಸಿಕೊಳ್ಳಲು ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಬಿಎಫ್‌ಸಿಗೆ ಗೆಲುವು ಅನಿವಾರ್ಯ. ಬೆಂಗಳೂರಿನ ತಂಡ 25 ಪಾಯಿಂಟ್ಸ್‌ಗಳೊಂದಿಗೆ ಏಳನೇ ಸ್ಥಾನದಲ್ಲಿದ್ದು, ಇನ್ನೂ ಮೂರು ಪಂದ್ಯಗಳನ್ನು ಆಡಲಿದೆ. ಅಗ್ರ ಆರು ತಂಡಗಳು ಮಾತ್ರ ‘ಪ್ಲೇ ಆಫ್’ಗೆ ಅರ್ಹತೆ ಪಡೆಯಲಿವೆ.
ಆದ್ದರಿಂದ ಶನಿವಾರ ಪೂರ್ಣ ಮೂರು ಪಾಯಿಂಟ್ಸ್ ಕಲೆಹಾಕಲು ವಿಫಲವಾದರೆ, ಬಿಎಫ್‌ಸಿಯ ‘ಪ್ಲೇ ಆಫ್’ ಕನಸಿಗೆ ಹಿನ್ನಡೆ ಉಂಟಾಗಲಿದೆ.
ಅಡ್ರಿಯಾನ್ ಲುನಾ ನಾಯಕತ್ವದ ಕೇರಳ ಬ್ಲಾಸ್ಟರ್ಸ್ ಪಾಯಿಂಟ್ಸ್ ಪಟ್ಟಿ ಯಲ್ಲಿ ಮೂರನೇ ಸ್ಥಾನದಲ್ಲಿದೆ. ಶನಿವಾರ ಗೆದ್ದರೆ, ಈ ತಂಡದ ‘ಪ್ಲೆ ಆಫ್‘ ಸ್ಥಾನ ಖಚಿತವಾಗಲಿದೆ.
ಬಿಎಫ್‌ಸಿಯ ರಾಯ್‌ಕೃಷ್ಣ ಮತ್ತು ಶಿವಶಕ್ತಿ ನಾರಾಯಣನ್ ಅವರು ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಬ್ಲಾಸ್ಟರ್ಸ್ ವಿರುದ್ಧವೂ ಕಾಲ್ಚಳಕ ತೋರುವ ಹುಮ್ಮ ಸ್ಸಿನಲ್ಲಿದ್ದಾರೆ. ರೋಹಿತ್ ಕುಮಾರ್ ಹಾಗೂ ಜಾವಿ ಹೆರ್ನಾಂಡಿಜ್ ಮಿಡ್‌ಫೀಲ್ಡ್‌ನಲ್ಲಿ ತಂಡದ ಶಕ್ತಿ ಎನಿಸಿದ್ದಾರೆ.
ಅಡ್ರಿಯಾನ್ ಲುನಾ ಮತ್ತು ದಿಮಿತ್ರೊಸ್ ದಿಯಾಮಂತಕೊಸ್ ಅವರಂತಹ ಆಟಗಾರರನ್ನು ಒಳ ಗೊಂಡ ಬ್ಲಾಸ್ಟರ್ಸ್ ತಂಡದ ಆಕ್ರ ಮಣ ತಡೆಯಬೇಕಾದರೆ ಬಿಎಫ್‌ಸಿ ಡಿಫೆಂಡರ್‌ಗಳಿಗೆ ಕಠಿಣ ಪರಿಶ್ರಮ ನಡೆಸಬೇಕಾಗಿದೆ. ಪಂದ್ಯದ ಎಲ್ಲ ಟಿಕೆಟ್‌ಗಳೂ ಮಾರಾಟವಾಗಿದ್ದು, ಶನಿವಾರವೂ ಕಂಠೀರವ ಕ್ರೀಡಾಂಗಣ ಕಿಕ್ಕಿರಿದು ತುಂಬಲಿದೆ.
ಪಂದ್ಯ ಆರಂಭ: ಸಂಜೆ 7.30
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.