ADVERTISEMENT

ಮಹಿಳೆಯರ ಏಷ್ಯಾಕಪ್ ಫುಟ್‌ಬಾಲ್ ಟೂರ್ನಿ: ಜಪಾನ್‌ಗೆ ಭರ್ಜರಿ ಆರಂಭ

ಮ್ಯಾನ್ಮಾರ್‌ಗೆ ಸೋಲು

ಪಿಟಿಐ
Published 21 ಜನವರಿ 2022, 13:47 IST
Last Updated 21 ಜನವರಿ 2022, 13:47 IST
ಮ್ಯಾನ್ಮಾರ್ ತಂಡದ ತುನ್ ಕಿನ್‌ ಮರ್ಲಾರ್‌ (ಎಡ) ಮತ್ತು ಜಪಾನ್‌ನ ಯುಯಿ ಹಸೆಗವಾ ಅವರು ಚೆಂಡಿಗಾಗಿ ಪೈಪೋಟಿ ನಡೆಸಿದರು– ರಾಯಿಟರ್ಸ್ ಚಿತ್ರ
ಮ್ಯಾನ್ಮಾರ್ ತಂಡದ ತುನ್ ಕಿನ್‌ ಮರ್ಲಾರ್‌ (ಎಡ) ಮತ್ತು ಜಪಾನ್‌ನ ಯುಯಿ ಹಸೆಗವಾ ಅವರು ಚೆಂಡಿಗಾಗಿ ಪೈಪೋಟಿ ನಡೆಸಿದರು– ರಾಯಿಟರ್ಸ್ ಚಿತ್ರ   

ಪುಣೆ: ಹಾಲಿ ಚಾಂಪಿಯನ್ ತಂಡವು ಎಎಫ್‌ಸಿ ಏಷ್ಯಾಕಪ್ ಮಹಿಳಾ ಫುಟ್‌ಬಾಲ್ ಟೂರ್ನಿಯಲ್ಲಿ ಭರ್ಜರಿ ಆರಂಭ ಮಾಡಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಆ ತಂಡವು 5–0ಯಿಂದ ಮ್ಯಾನ್ಮಾರ್‌ ತಂಡವನ್ನು ಸೋಲಿಸಿತು.

ಶಿವ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ನಡೆದ ‘ಸಿ’ ಗುಂಪಿನ ಈ ಹಣಾಹಣಿಯಲ್ಲಿ ಜಪಾನ್ ಆರಂಭದಿಂದಲೇ ಪಾರಮ್ಯ ಮೆರೆಯಿತು.

ವಿಜೇತ ತಂಡದ ಪರ ಯುಯಿ ಹಸೆಗವಾ (47 ಮತ್ತು 90+2ನೇ ನಿಮಿಷ), ರಿಕೊ ಯುಕಿ (22ನೇ ನಿಮಿಷ), ಹಿಕಾರು ನಮೊಟೊ (52ನೇ ನಿಮಿಷ) ಮತ್ತು ಯುಯಿ ನರುಮಿಯಾ (70) ಕಾಲ್ಚಳಕ ತೋರಿದರು.

ADVERTISEMENT

ಮುಂದಿನ ಪಂದ್ಯದಲ್ಲಿ ಜಪಾನ್‌ ತಂಡವು ಸೋಮವಾರ ವಿಯೆಟ್ನಾಂ ತಂಡವನ್ನೂ, ಮ್ಯಾನ್ಮಾರ್‌, ಕೊರಿಯಾ ತಂಡವನ್ನೂ ಎದುರಿಸಲಿವೆ.

ಆಸ್ಟ್ರೇಲಿಯಾಗೆ ಭರ್ಜರಿ ಜಯ: ‘ಬಿ’ ಗುಂಪಿನ ಪಂದ್ಯದಲ್ಲಿ ಸಮಂತಾ ಕೆರ್‌ (9, 11, 26, 36, 54ನೇ ನಿ.) ಮತ್ತು ಎಮಿಲಿ ವಾನ್‌ ಎಗ್‌ಮಂಡ್‌ (39, 57, 59, 69ನೇ ನಿ.) ಗಳಿಸಿದ ಗೋಲುಗಳ ನೆರವಿನಿಂದ ಆಸ್ಟ್ರೇಲಿಯಾ ಇಂಡೊನೇಷ್ಯಾ ಎದುರು 18–0 ಗೋಲುಗಳಿಂದ ಗೆದ್ದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.