ADVERTISEMENT

Asian Cup | ಲೈಂಗಿಕ ದೌರ್ಜನ್ಯ ಆರೋಪ: ತಂಡ ತ್ಯಜಿಸಿದ ಇಟೊ

ಏಜೆನ್ಸೀಸ್
Published 1 ಫೆಬ್ರುವರಿ 2024, 16:32 IST
Last Updated 1 ಫೆಬ್ರುವರಿ 2024, 16:32 IST
   

ದೋಹಾ: ಇಬ್ಬರು ಮಹಿಳೆಯರು, ತಮ್ಮ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಮಿಡ್‌ಫೀಲ್ಡರ್ ಜುನ್ಯಾ ಇಟೊ ಅವರು ಏಷ್ಯನ್‌ ಕಪ್‌ನಲ್ಲಿ ಆಡುತ್ತಿರುವ ತಂಡದಿಂದ ಹೊರನಡೆದಿದ್ದಾರೆ ಎಂದು ಜಪಾನ್ ಫುಟ್‌ಬಾಲ್‌ ಸಂಸ್ಥೆ ಗುರುವಾರ ತಿಳಿಸಿದೆ. ಆದರೆ ತಮ್ಮ ವಿರುದ್ಧದ ಆರೋಪವನ್ನು ಇಟೊ ಅಲ್ಲಗಳೆದಿದ್ದಾರೆ.

ಮಾನಸಿಕ ಶಾಂತಿ ಮತ್ತು ದೈಹಿಕ ಸ್ವಾಸ್ಥ್ಯವನ್ನು ಲಕ್ಷ್ಯದಲ್ಲಿಟ್ಟುಕೊಂಡು ಇಟೊ ಅವರು ತಂಡ ತ್ಯಜಿಸಿದ್ದಾರೆ ಎಂದು ಜಪಾನ್‌ ಫುಟ್‌ಬಾಲ್‌ ಸಂಸ್ಥೆ ತಿಳಿಸಿದೆ. ಕಳೆದ ವರ್ಷ ಒಸಾಕಾದಲ್ಲಿ ನಡೆದಿತ್ತೆನ್ನಲಾದ ಈ ಪ್ರಕರಣದ ಬಗ್ಗೆ ಭಿನ್ನ ರೀತಿಯ ಹೇಳಿಕೆಗಳು ಕೇಳಿಬಂದಿವೆ. ಈ ಪ್ರಕರಣವನ್ನು ಎಚ್ಚರಿಕೆಯಿಂದ ನಿರ್ವಹಿಸಲಾಗುತ್ತದೆ ಎಂದೂ ಅದು ಹೇಳಿದೆ.

ಜಪಾನ್ ಪೊಲೀಸರು 30 ವರ್ಷದ ಆಟಗಾರನ ವಿರುದ್ಧ ತನಿಖೆ ಕೈಗೊಂಡಿದ್ದಾರೆ. ಇಟೊ ಜಪಾನ್ ಪರ 54 ಪಂದ್ಯಗಳನ್ನು ಆಡಿದ್ದು 13 ಗೋಲುಗಳನ್ನು ಗಳಿಸಿದ್ದಾರೆ.

ADVERTISEMENT

ಕಳೆದ ವರ್ಷದ ಜೂನ್‌ನಲ್ಲಿ ಒಸಾಕಾದಲ್ಲಿ ಜಪಾನ್ ಮತ್ತು ಪೆರು ನಡುವಣ ಸೌಹಾರ್ದ ಪಂದ್ಯದ ನಂತರ ಹೋಟೆಲ್‌ನಲ್ಲಿ ಈ ಪ್ರಕರಣ ನಡೆದಿದೆ ಎನ್ನಲಾಗಿದೆ.

ಇಟೊ ಬದಲು ಸದ್ಯಕ್ಕೆ ಯಾವುದೇ ಆಟಗಾರನ್ನು ಬದಲಿಯಾಗಿ ತಂಡಕ್ಕೆ ತೆಗೆದುಕೊಳ್ಳದಿರಲು ಫುಟ್‌ಬಾಲ್ ಸಂಸ್ಥೆ ನಿರ್ಧರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.