ನವದೆಹಲಿ: ಭಾರತ ಫುಟ್‌ಬಾಲ್ ತಂಡವು ಇದೇ 18ರಂದು ಹೈದರಾಬಾದ್‌ನಲ್ಲಿ ಮಲೇಷ್ಯಾ ವಿರುದ್ಧ ಸೌಹಾರ್ದ ಪಂದ್ಯ ಆಡಲಿದ್ದು, 26 ಸಂಭಾವ್ಯ ಆಟಗಾರರನ್ನು ಮಂಗಳವಾರ ಪ್ರಕಟಿಸಲಾಗಿದೆ. ಮೊಣಕಾಲು ಗಾಯದಿಂದ ಚೇತರಿಸಿಕೊಂಡಿರುವ ಅನುಭವಿ ಡಿಫೆಂಡರ್ ಸಂದೇಶ್ ಜಿಂಗಾನ್ ಅವರಿಗೆ ಸ್ಥಾನ ಕಲ್ಪಿಸಲಾಗಿದೆ.
31 ವರ್ಷ ವಯಸ್ಸಿನ ಜಿಂಗಾನ್, ಜನವರಿಯಿಂದ ತಂಡದಿಂದ ಹೊರಗುಳಿದಿದ್ದರು. ಹೀಗಾಗಿ, ಏಷ್ಯನ್ ಕಪ್, ಐಎಸ್ಎಲ್ ಋತುವಿನ ಪಂದ್ಯಗಳನ್ನು ಕಳೆದುಕೊಂಡಿದ್ದರು. ಏಷ್ಯನ್ ಕಪ್‌ನಲ್ಲಿ ಸಿರಿಯಾ ವಿರುದ್ಧದ ಭಾರತದ ಪಂದ್ಯದ ವೇಳೆ ಜಿಂಗಾನ್ ಗಾಯಗೊಂಡಿದ್ದರು.
ಸೆಪ್ಟೆಂಬರ್‌ನಲ್ಲಿ ಇಂಟರ್‌ಕಾಂಟಿನೆಂಟಲ್ ಕಪ್‌ನಲ್ಲಿ ಮಾರಿಷಸ್ ವಿರುದ್ಧ ಭಾರತ ತಂಡವನ್ನು ಮುನ್ನಡೆಸಿದ್ದ ರಾಹುಲ್ ಭೇಕೆ ತಮ್ಮ ಸ್ಥಾನವನ್ನು ಉಳಿಸಿಕೊಂಡರೆ, ಮೋಹನ್ ಬಾಗನ್ ನಾಯಕ ಮತ್ತು ಡಿಫೆಂಡರ್ ಸುಭಾಶಿಶ್ ಬೋಸ್ ಅವರನ್ನು ಕೈಬಿಡಲಾಯಿತು.
ಜುಲೈನಲ್ಲಿ ಇಗೊರ್ ಸ್ಟಿಮ್ಯಾಚ್‌ರಿಂದ ಅಧಿಕಾರ ವಹಿಸಿಕೊಂಡ ನಂತರ ಭಾರತದ ಮುಖ್ಯ ಕೋಚ್ ಮನೊಲೊ ಮಾರ್ಕ್ವೆಝ್ ಮೊದಲ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.
ಸಂಭಾವ್ಯ ತಂಡ: ಗೋಲ್ ಕೀಪರ್‌ಗಳು: ಅಮರಿಂದರ್ ಸಿಂಗ್, ಗುರ್‌ಪ್ರೀತ್ ಸಿಂಗ್ ಸಂಧು ಮತ್ತು ವಿಶಾಲ್ ಕೈತ್.
ಡಿಫೆಂಡರ್ಸ್: ಆಕಾಶ್ ಸಾಂಗ್ವಾನ್, ಅನ್ವರ್ ಅಲಿ, ಆಸೀಶ್ ರೈ, ಚಿಂಗ್ಲೆನ್ಸನಾ ಸಿಂಗ್ ಕೊನ್ಶಮ್, ಹ್ಮಿಂಗ್‌ಥನ್ಮಾವಿಯಾ ರಾಲ್ಟೆ, ಮೆಹ್ತಾಬ್ ಸಿಂಗ್, ರಾಹುಲ್ ಭೇಕೆ, ರೋಷನ್ ಸಿಂಗ್ ನೌರೆಮ್ ಮತ್ತು ಸಂದೇಶ್ ಜಿಂಗಾನ್.
ಮಿಡ್‌ಫೀಲ್ಡರ್ಸ್: ಅನಿರುದ್ಧ್ ಥಾಪಾ, ಬ್ರೆಂಡನ್ ಫರ್ನಾಂಡಿಸ್, ಜೀಕ್ಸನ್ ಸಿಂಗ್, ಜಿತಿನ್ ಎಂ.ಎಸ್, ಲಾಲೆಂಗ್ಮಾವಿಯಾ ರಾಲ್ಟೆ, ಲಿಸ್ಟನ್ ಕೊಲಾಕೊ, ಸುರೇಶ್ ಸಿಂಗ್ ವಾಂಗ್ಜಾಮ್ ಮತ್ತು ವಿಬಿನ್ ಮೋಹನನ್.
ಫಾರ್ವರ್ಡ್ಸ್: ಎಡ್ಮಂಡ್ ಲಾಲ್‌ರಿಂಡಿಕಾ, ಇರ್ಫಾನ್ ಯಾದವಾಡ, ಫಾರೂಕ್ ಚೌಧರಿ, ಲಾಲಿಯನ್ಜುವಾಲಾ ಚಾಂಗ್ಟೆ, ಮನ್ವಿರ್ ಸಿಂಗ್ ಮತ್ತು ವಿಕ್ರಮ್ ಪ್ರತಾಪ್ ಸಿಂಗ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.