ಬೆಂಗಳೂರು: ಎನ್.ಎ. ಹ್ಯಾರಿಸ್ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ (ಕೆಎಸ್‌ಎಫ್‌ಎ) ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.
ಭಾನುವಾರ ನಡೆದ ಸಂಸ್ಥೆಯ ಸರ್ವ ಸಾಮಾನ್ಯ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಇವರು 2023ರವರೆಗೆ ಕಾರ್ಯನಿರ್ವಹಿಸುವರು.
ಪದಾಧಿಕಾರಿಗಳು: ಎನ್. ಎ. ಹ್ಯಾರಿಸ್ (ಅಧ್ಯಕ್ಷ), ಕೆ. ಗೋವಿಂದರಾಜ್, ಎಂ.ಪಿ. ಸ್ವಾಮಿ, ಹನೀಫ್ ಮೊಹಮ್ಮದ್, ಪಿ.ಕೆ. ಜಗದೀಶ್, ಟಿ. ಪುಟ್ಟರಾಜು (ಉಪಾಧ್ಯಕ್ಷರು), ಎಂ. ಸತ್ಯನಾರಾಯಣ, ಅಸ್ಲಂ ಖಾನ್, ಶಕೀಲ್ ಅಬ್ದುಲ್ ರೆಹಮಾನ್, ಬಿ.ಕೆ. ಮುನಿರಾಜ್ (ಕಾರ್ಯದರ್ಶಿಗಳು), ಎಂ. ಕುಮಾರ್ (ಖಜಾಂಚಿ).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.