ಬೆಂಗಳೂರು: ಕಿಕ್‌ಸ್ಟಾರ್ಟ್ ಎಫ್‌ಸಿ ಮತ್ತು ಮಿಸಾಕ ಯುನೈಟೆಡ್ ಎಫ್‌ಸಿ ತಂಡಗಳು ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ ಆಶ್ರಯದ ಮಹಿಳಾ ಲೀಗ್‌ನಲ್ಲಿ ಭಾನುವಾರ ಭರ್ಜರಿ ಜಯ ಸಾಧಿಸಿದವು.
ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯಗಳಲ್ಲಿ ಕಿಕ್‌ಸ್ಟಾರ್ಟ್ 6–0ಯಿಂದ ರೆಬೆಲ್ಸ್ ವಿಮೆನ್ಸ್ ಎಫ್‌ಸಿ ವಿರುದ್ಧ ಮತ್ತು ಮಿಸಾಕ 4–0ಯಿಂದ ಬೆಂಗಳೂರು ಗ್ಯಾಲಕ್ಸಿ ಎಫ್‌ಸಿಯನ್ನು ಮಣಿಸಿತು.
ಕಿಕ್‌ಸ್ಟಾರ್ಟ್ ಪರವಾಗಿ ಕಾವ್ಯ (42ನೇ ನಿಮಿಷ), ಸುಮಿತ್ರ (44ನೇ ನಿ), ಮಾರ್ಗರೆಟ್ (48ನೇ ನಿ), ಫಂಜೊಬಮ್ ನಿರ್ಮಲಾ ದೇವಿ (54ನೇ ನಿ), ಸೋನಿಯಾ ರಾಣಾ (90+1ನೇ ನಿ) ಮತ್ತು ಖುನುಮಾವುಮ್ ನಿರ್ಮಲಾ ದೇವಿ (90+2ನೇ ನಿ) ಗೋಲು ಗಳಿಸಿದರು.
ಬೆಂಗಳೂರು ಗ್ಯಾಲಕ್ಸಿ ಎದುರಿನ ಪಂದ್ಯದಲ್ಲಿ ಮಿಸಾಕ ತಂಡಕ್ಕಾಗಿ ಲಾಲ್‌ಮುಹಾಮಿ (3ನೇ ನಿ), ಅಂಜಲಿ (22ನೇ ನಿ) ಮತ್ತು ಲಾಲ್‌ರಿಮ್ವಾನಿ (34, 60ನೇ ನಿ) ಚೆಂಡನ್ನು ಗುರಿ ಮುಟ್ಟಿಸಿದರು.
ದಿನದ ಮೊದಲ ಪಂದ್ಯದಲ್ಲಿ ಬೆಂಗಳೂರು ಬ್ರೇವ್ಸ್ 2–0ಯಿಂದ ಸ್ಲಾಮ್ಸರ್ಸ್ ಎಫ್‌ಸಿಯನ್ನು ಸೋಲಿಸಿತು. ಸಾರಾ (31ನೇ ನಿ) ಮತ್ತು ಲಾಲ್‌ಚನ್ಹಿಮಿ (85ನೇ ನಿ) ಗೋಲು ಗಳಿಸಿದರು. ಬೆಂಗಳೂರು ಯುನೈಟೆಡ್ ಎದುರಿನ ಪಂದ್ಯದಲ್ಲಿ ಪರಿಕ್ರಮ ವಿಮೆನ್ಸ್ ಎಫ್‌ಸಿ 3–1ರಲ್ಲಿ ಜಯ ಗಳಿಸಿತು. ಪರಿಕ್ರಮ ಪರವಾಗಿ ಮಿಥಿಲಾ ರಮಣಿ (72ನೇ ನಿ), ಕೊಜೋಲ್ (83ನೇ ನಿ), ಸ್ಫೂರ್ತಿ (90+2ನೇ ನಿ) ಚೆಂಡನ್ನು ಗುರಿ ಮುಟ್ಟಿಸಿದರೆ ಎದುರಾಳಿ ತಂಡದ ಶೋಭನಾ (35ನೇ ನಿ) ಯಶಸ್ಸು ಕಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.