ADVERTISEMENT

ಫುಟ್‌ಬಾಲ್‌: ಕರ್ನಾಟಕಕ್ಕೆ ಗೆಲುವು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 18:03 IST
Last Updated 21 ಅಕ್ಟೋಬರ್ 2024, 18:03 IST
   

ಬೆಂಗಳೂರು: ಕರ್ನಾಟಕದ ತಂಡವು ಪಶ್ಚಿಮ ಬಂಗಾಳದ ನಾಡಿಯಾದಲ್ಲಿ ‘ರಾಜಮಾತಾ ಜೀಜಾಬಾಯಿ ಟ್ರೋಫಿ’ಗಾಗಿ ನಡೆಯುತ್ತಿರುವ 29ನೇ ಮಹಿಳೆಯರ ರಾಷ್ಟ್ರೀಯ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಗೆಲುವಿನ ಓಟವನ್ನು ಮುಂದುವರಿಸಿದೆ.

ಅಫ್ರೀನ್ ಪೀರ್‌ಭಾಯ್‌ ನಾಯಕತ್ವದ ಕರ್ನಾಟಕ ತಂಡವು ಸೋಮವಾರ ಬಿ ಗುಂಪಿನ ಎರಡನೇ ಪಂದ್ಯದಲ್ಲಿ 1–0 ಗೋಲುಗಳಿಂದ ಬಿಹಾರ ತಂಡವನ್ನು ಸೋಲಿಸಿತು. ಮೈತ್ರಿ ಪಾಲಸಮುದ್ರಂ (45+4ನೇ) ಅವರು ಕರ್ನಾಟಕದ ಪರ ಗೆಲುವಿನ ಗೋಲು ದಾಖಲಿಸಿದರು. 23ರಂದು ಆತಿಥೇಯ ಪಶ್ಚಿಮ ಬಂಗಾಳ ತಂಡವನ್ನು ಎದುರಿಸಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT