ವಾಸ್ಕೊ: ಸತತ ಏಳು ಪಂದ್ಯಗಳಲ್ಲಿ ಅಜೇಯವಾಗಿರುವ ಬೆಂಗಳೂರು ಎಫ್‌ಸಿ (ಬಿಎಫ್‌ಸಿ) ತಂಡವು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯಲ್ಲಿ ಭಾನುವಾರ ಕೇರಳ ಬ್ಲಾಸ್ಟರ್ಸ್ ಸವಾಲು ಎದುರಿಸಲಿದೆ.
ಕಳೆದ ಪಂದ್ಯದಲ್ಲಿ ಚೆನ್ನೈಯಿನ್ ಎಫ್‌ಸಿ ಎದುರು 3–0ಯಿಂದ ಜಯಿಸಿದ್ದ ಸುನಿಲ್ ಚೆಟ್ರಿ ನಾಯಕತ್ವದ ಬೆಂಗಳೂರು ತಂಡವು ಈ ಪಂದ್ಯದಲ್ಲಿಯೂ ಅದೇ ಲಯ ಮುಂದುವರಿಸುವ ಛಲ ಹೊಂದಿದೆ.
ಸುನಿಲ್ ಚೆಟ್ರಿ ಅವರು ಲಯಕ್ಕೆ ಮರಳಿದ್ದು ತಂಡದ ಬಲ ಹೆಚ್ಚಿಸಿದೆ. ಈ ಆವೃತ್ತಿಯ ಮೊದಲ 11 ಪಂದ್ಯಗಳಲ್ಲಿ ಒಂದೂ ಗೋಲು ಗಳಿಸದಿದ್ದ ಅವರು, ಕಳೆದ ಎರಡು ಹಣಾಹಣಿಗಳಲ್ಲಿ ಎರಡು ಗೋಲುಗಳನ್ನು ಅಸಿಸ್ಟ್ ಮಾಡಿದ್ದರು. ಉದಾಂತ ಸಿಂಗ್ ಕೂಡ ಉತ್ತಮ ಸಾಮರ್ಥ್ಯ ತೋರುತ್ತಿದ್ದಾರೆ.
13 ಪಂದ್ಯಗಳನ್ನು ಆಡಿರುವ ಬೆಂಗಳೂರು 17 ಪಾಯಿಂಟ್ಸ್ ಗಳಿಸಿದ್ದು ಪಾಯಿಂಟ್ಸ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.
ಕೇರಳ ಈ ಆವೃತ್ತಿಯಲ್ಲಿ ತನ್ನ ಕೊನೆಯ ಪಂದ್ಯವನ್ನು ಒಡಿಶಾ ಎದುರು ಆಡಿತ್ತು. ಆ ಪಂದ್ಯದಲ್ಲಿ 2–0ಯಿಂದ ಜಯಿಸಿತ್ತು. ಕೋವಿಡ್ ಕಾರಣದಿಂದ ಆ ತಂಡವು ಆಡಬೇಕಿದ್ದ ಎರಡು ಪಂದ್ಯಗಳು ಮುಂದೂಡಿಕೆಯಾಗಿದ್ದವು.
ಸತತ 10 ಪಂದ್ಯಗಳಲ್ಲಿ ಕೇರಳ ಬ್ಲಾಸ್ಟರ್ಸ್ ಸೋತಿಲ್ಲ. 11 ಪಂದ್ಯಗಳಿಂದ 20 ಪಾಯಿಂಟ್ಸ್ ಕಲೆಹಾಕಿರುವ ತಂಡವು ಸದ್ಯ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಪಂದ್ಯ ಆರಂಭ: ರಾತ್ರಿ 7.30
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.