ADVERTISEMENT

ಟೋಟನ್‌ಹ್ಯಾಮ್ ಜತೆ ಕಿಕ್‌ಸ್ಟಾರ್ಟ್ 3 ವರ್ಷಗಳ ಪಾಲುದಾರಿಕೆ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2023, 0:30 IST
Last Updated 29 ನವೆಂಬರ್ 2023, 0:30 IST
ಕಿಕ್‌ಸ್ಟಾರ್ಟ್ ಎಫ್‌ಸಿಯ ಸಿಇಒ ಲಕ್ಷ್ಮಣ್‌ ಭಟ್ಟಾರಾಯ್‌, ಅಧ್ಯಕ್ಷ ಶೇಖರ್ ರಾಜನ್, ಕೆಎಸ್‌ಎಫ್‌ಎ ಅಧ್ಯಕ್ಷ, ಶಾಸಕ ಎನ್‌.ಎ. ಹ್ಯಾರಿಸ್, ಟೋಟನ್‌ಹ್ಯಾಮ್ ಹಾಟ್ಟ್‌ಸ್ಪರ್‌ನ ರಾಯಭಾರಿಗಳಾದ ಓಸ್ವಾಲ್ಡೊ ಆರ್ಡಿಲ್ಸ್ ಮತ್ತು ಲೆಡ್ಲಿ ಕಿಂಗ್‌ ಅವರು ಮಂಗಳವಾರ ಜೆರ್ಸಿಗಳನ್ನು ವಿನಿಮಯ ಮಾಡಿಕೊಂಡರು –ಪ್ರಜಾವಾಣಿ ಚಿತ್ರ
ಕಿಕ್‌ಸ್ಟಾರ್ಟ್ ಎಫ್‌ಸಿಯ ಸಿಇಒ ಲಕ್ಷ್ಮಣ್‌ ಭಟ್ಟಾರಾಯ್‌, ಅಧ್ಯಕ್ಷ ಶೇಖರ್ ರಾಜನ್, ಕೆಎಸ್‌ಎಫ್‌ಎ ಅಧ್ಯಕ್ಷ, ಶಾಸಕ ಎನ್‌.ಎ. ಹ್ಯಾರಿಸ್, ಟೋಟನ್‌ಹ್ಯಾಮ್ ಹಾಟ್ಟ್‌ಸ್ಪರ್‌ನ ರಾಯಭಾರಿಗಳಾದ ಓಸ್ವಾಲ್ಡೊ ಆರ್ಡಿಲ್ಸ್ ಮತ್ತು ಲೆಡ್ಲಿ ಕಿಂಗ್‌ ಅವರು ಮಂಗಳವಾರ ಜೆರ್ಸಿಗಳನ್ನು ವಿನಿಮಯ ಮಾಡಿಕೊಂಡರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕಿಕ್‌ಸ್ಟಾರ್ಟ್ ಫುಟ್‌ಬಾಲ್ ಕ್ಲಬ್ ಮಂಗಳವಾರ ಇಂಗ್ಲಿಷ್ ಪ್ರೀಮಿಯರ್ ಲೀಗ ತಂಡವಾದ ಟೋಟನ್‌ಹ್ಯಾಮ್ ಹಾಟ್‌ಸ್ಪರ್‌ನೊಂದಿಗೆ ಮೂರು ವರ್ಷಗಳ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿತು.

ಬೆಂಗಳೂರಿನ ತಾಜ್ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ಕಿಕ್‌ಸ್ಟಾರ್ಟ್‌ನ ಅಧ್ಯಕ್ಷ ಶೇಖರ್‌ ರಾಜನ್‌ ಮತ್ತು ಸಿಇಒ ಲಕ್ಷ್ಮಣ್‌ ಭಟ್ಟಾರಾಯ್‌ ಅವರು ಟೋಟನ್‌ಹ್ಯಾಮ್‌ನ ರಾಯಭಾರಿಗಳು ಹಾಗೂ ಫುಟ್‌ಬಾಲ್‌ ದಿಗ್ಗಜರಾದ ಲೆಡ್ಲಿ ಕಿಂಗ್‌ ಮತ್ತು ಒಸ್ವಾಲ್ಡೊ ಆರ್ಡಿಲ್ಸ್‌ ಅವರೊಂದಿಗೆ ಒಪ್ಪಂದ ಮಾಡಿಕೊಂಡರು.

‘ಪಾಲುದಾರಿಕೆ ಒಪ್ಪಂದದ ಭಾಗವಾಗಿ ಟೋಟನ್‌ಹ್ಯಾನ್‌ನ ಜಾಗತಿಕ ಫುಟ್‌ಬಾಲ್ ಕೋಚಿಂಗ್ ತಂಡಕ್ಕೆ ಕಿಕ್‌ಸ್ಟಾರ್ಟ್ ಎಫ್‌ಸಿ ಪ್ರವೇಶ ಪಡೆದಿದೆ. ಮುಂದಿನ ದಿನಗಳಲ್ಲಿ ಕಿಕ್‌ಸ್ಟಾರ್‌ನ ಆಟಗಾರರಿಗೆ ಲಂಡನ್‌ಗೆ ತೆರಳಿ ವಿಶೇಷ ತರಬೇತಿ ಪಡೆಯುವ ಅವಕಾಶವಿದೆ. ಮಾತ್ರವಲ್ಲ, ನುರಿತ ಕೋಚ್‌ಗಳಿಂದ ಮಾರ್ಗದರ್ಶನ, ತರಬೇತಿ ಸಿಗಲಿದೆ’ ಎಂದು 1978ರ ಫಿಫಾ ವಿಶ್ವಕಪ್‌ ವಿಜೇತ ಅರ್ಜೆಂಟೀನಾ ರಾಷ್ಟ್ರೀಯ ತಂಡದಲ್ಲಿದ್ದ ಓಸ್ವಾಲ್ಡೊ ಆರ್ಡಿಲ್ಸ್‌ ಹೇಳಿದರು.

ADVERTISEMENT

‘ಭಾರತದಲ್ಲಿ ಫುಟ್‌ಬಾಲ್‌ ಕ್ರೀಡೆ ಸಾಕಷ್ಟು ಪ್ರಸಿದ್ಧಿ ಹೊಂದಿದ್ದರೂ ಜಾಗತಿಕ ಶಕ್ತಿಯಾಗಿ ಹೊರಹೊಮ್ಮಲು ತಳಮಟ್ಟದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುವ ಅಗತ್ಯವಿದೆ. ಯುವ ಪ್ರತಿಭೆಗಳನ್ನು ಗುರುತಿಸಿ ಸೂಕ್ತ ತರಬೇತಿ ನೀಡಬೇಕಿದೆ. ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡವನ್ನು ನಾವು ಎದುರು ನೋಡುತ್ತಿದ್ದೇವೆ’ ಎಂದು ಟೋಟನ್‌ಹ್ಯಾಮ್ ತಂಡದ ಮಾಜಿ ನಾಯಕರೂ ಆಗಿರುವ ಲೆಡ್ಲಿ ಕಿಂಗ್‌ ಹೇಳಿದರು.

‘ಟೋಟನ್‌ಹ್ಯಾಮ್‌ ತಂಡಕ್ಕೆ ನಾವು ಆಟಗಾರರನ್ನು ಹೇಗೆ ತಯಾರಿಸುತ್ತೇವೆ ಎಂಬ ಅನುಭವವನ್ನು ಕಿಕ್‌ಸ್ಟಾರ್‌ ತಂಡದೊಂದಿಗೆ ಹಂಚಿಕೊಳ್ಳಲಿದ್ದೇವೆ. ಮುಂದಿನ ದಿನಗಳಲ್ಲಿ ಇಂಗ್ಲಿಷ್ ಪ್ರೀಮಿಯರ್ ಲೀಗ್‌ಗೂ ಭಾರತೀಯ ಆಟಗಾರರು ಬರಬೇಕು ಎಂಬುದು ನಮ್ಮ ನಿರೀಕ್ಷೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.