ADVERTISEMENT

ಫುಟ್‌ಬಾಲ್‌ ಟೂರ್ನಿ | ಗೆಲುವಿನೊಂದಿಗೆ ಸೆಮಿಗೆ ಕಿಕ್‌ಸ್ಟಾರ್ಟ್‌

ಸಿ. ಪುಟ್ಟಯ್ಯ ಸ್ಮಾರಕ್‌ ಕಪ್‌ ಫುಟ್‌ಬಾಲ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2024, 14:20 IST
Last Updated 30 ಸೆಪ್ಟೆಂಬರ್ 2024, 14:20 IST
<div class="paragraphs"><p>ಕಿಕ್‌ಸ್ಟಾರ್ಟ್‌ ತಂಡದ ಅಭಿಷೇಕ್‌ ಶಂಕರ್‌ ಪವಾರ್ (ಎಡದಿಂದ ಎರಡನೇಯವರು) ಚೆಂಡಿಗೆ ಕಿಕ್‌ ನೀಡಿದರು </p></div>

ಕಿಕ್‌ಸ್ಟಾರ್ಟ್‌ ತಂಡದ ಅಭಿಷೇಕ್‌ ಶಂಕರ್‌ ಪವಾರ್ (ಎಡದಿಂದ ಎರಡನೇಯವರು) ಚೆಂಡಿಗೆ ಕಿಕ್‌ ನೀಡಿದರು

   

–ಪ್ರಜಾವಾಣಿ ಚಿತ್ರ: ಪುಷ್ಕರ್‌ ವಿ.

ಬೆಂಗಳೂರು: ಅಭಿಷೇಕ್ ಶಂಕರ್ ಪವಾರ್‌ ಮತ್ತು ಸೈಖೋಮ್ ಬೋರಿಶ್ ಸಿಂಗ್ ಅವರ ಹ್ಯಾಟ್ರಿಕ್‌ ಗೋಲುಗಳ ನೆರವಿನಿಂದ ಕಿಕ್‌ಸ್ಟಾರ್ಟ್‌ ತಂಡವು ಇಲ್ಲಿ ನಡೆಯುತ್ತಿರುವ ಸಿ. ಪುಟ್ಟಯ್ಯ ಸ್ಮಾರಕ್‌ ಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ 7–2ರಿಂದ ಎಂಎಫ್‌ಎಆರ್‌ ಸ್ಟೂಡೆಂಟ್ಸ್ ಯೂನಿಯನ್‌ ಎಫ್‌ಸಿ ತಂಡವನ್ನು ಸುಲಭವಾಗಿ ಮಣಿಸಿತು.

ADVERTISEMENT

ಬೆಂಗಳೂರು ಫುಟ್‌ಬಾಲ್‌ ಮೈದಾನದಲ್ಲಿ ಸೋಮವಾರ ನಡೆದ ‘ಬಿ’ ಗುಂಪಿನ ಕೊನೆಯ ಪಂದ್ಯದಲ್ಲಿ ಕಿಕ್‌ಸ್ಟಾರ್ಟ್‌ ತಂಡವು ಈ ಗೆಲುವಿನೊಂದಿಗೆ ನಾಲ್ಕರ ಘಟ್ಟಕ್ಕೆ ಮುನ್ನಡೆಯಿತು. ‘ಡಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡವನ್ನು ಅ.4ರಂದು ಎರಡನೇ ಸೆಮಿಫೈನಲ್‌ನಲ್ಲಿ ಎದುರಿಸಲಿದೆ.

ಕಿಕ್‌ಸ್ಟಾರ್ಟ್‌ ಪರ ಅಭಿಷೇಕ್‌ (12ನೇ, 42ನೇ ಮತ್ತು 88ನೇ ನಿಮಿಷ), ಸೈಖೋಮ್‌ (44ನೇ, 57ನೇ ಮತ್ತು 60ನೇ) ತಲಾ ಮೂರು ಗೋಲು ಗಳಿಸಿದರೆ, ಲೇನಾಲ್ಡ್ ಕ್ಯಾರಲ್ ಮಾರ್ಕ್ (63ನೇ) ಒಂದು ಬಾರಿ ಚೆಂಡನ್ನು ಗುರಿ ಸೇರಿಸಿದರು. ಸ್ಟೂಡೆಂಟ್ಸ್‌ ಯೂನಿಯನ್‌ ಪರ ಹೇಮಂತ್‌ ಕುಮಾರ್‌ (13ನೇ) ಮತ್ತು ಅಂಕಿತ್ ಸಿಂಗ್‌ (45+5ನೇ) ತಲಾ ಒಂದು ಗೋಲು ತಂದಿತ್ತರು.

ಮತ್ತೊಂದು ಪಂದ್ಯದಲ್ಲಿ ರೂಟ್ಸ್‌ ಎಫ್‌ಸಿ ತಂಡವು 2–1 ಗೋಲುಗಳಿಂದ ಎಎಸ್‌ಸಿ ಅಂಡ್ ಸೆಂಟರ್‌ ಎಫ್‌ಸಿ ತಂಡವನ್ನು ಸೋಲಿಸಿತು. ರೂಟ್ಸ್‌ನ ಮೊಹಮ್ಮದ್ ತಮೀಮ್ ಟಿ.ಕೆ. (23ನೇ) ಮತ್ತು ಗಾಡ್ವಿನ್ ಜಾನ್ಸನ್ (88ನೇ) ತಲಾ ಒಂದು ಗೋಲು ಗಳಿಸಿದರು. ಎಎಸ್‌ಸಿ ಪರ ಏಕೈಕ ಗೋಲನ್ನು ನೀರಜ್ ಸಿಂಗ್ (79ನೇ) ದಾಖಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.