ADVERTISEMENT

ಮನೀಷಾ ಕಲ್ಯಾಣಿ ವರ್ಷದ ಮಹಿಳಾ ಆಟಗಾರ್ತಿ: ಚಾಂಗ್ಟೆಗೆ ಎಐಎಫ್‌ಎಫ್‌ ವರ್ಷದ ಆಟಗಾರ ಗೌರವ

ಪಿಟಿಐ
Published 4 ಜುಲೈ 2023, 23:30 IST
Last Updated 4 ಜುಲೈ 2023, 23:30 IST
ಮನೀಷಾ ಕಲ್ಯಾಣಿ
ಮನೀಷಾ ಕಲ್ಯಾಣಿ   

ಬೆಂಗಳೂರು: ಭಾರತ ತಂಡದ ವಿಂಗರ್‌ ಲಲ್ಲಿಯಾನ್‌ಜುವಾಲಾ ಚಾಂಗ್ಟೆ ಅವರು ಐಎಸ್‌ಎಲ್‌ ಮತ್ತು ರಾಷ್ಟ್ರೀಯ ತಂಡದ ಪರ ನೀಡಿದ ಸ್ಫೂರ್ತಿಯುತ ಪ್ರದರ್ಶನಕ್ಕಾಗಿ ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ ಮಂಗಳವಾರ ಪ್ರಕಟಿಸಿದ ‘ವರ್ಷದ ಆಟಗಾರ’ ಗೌರವಕ್ಕೆ ಪಾತ್ರರಾಗಿದ್ದಾರೆ.

ಮುಂಬೈ ಸಿಟಿ ಎಫ್‌ಸಿ ತಂಡವನ್ನು ಪ್ರತಿನಿಧಿಸುವ 26 ವರ್ಷದ ಚಾಂಗ್ತೆ ಅವರು ಈ ವರ್ಷ 12 ಪಂದ್ಯಗಳಲ್ಲಿ ಭಾರತ ತಂಡಕ್ಕೆ ಆಡಿದ್ದರು. ಅವರು ಈ ಪ್ರತಿಷ್ಠಿತ ಪ್ರಶಸ್ತಿ ಪೈಪೋಟಿಯಲ್ಲಿ ರಾಷ್ಟ್ರೀಯ ತಂಡದ ಸಹ ಆಟಗಾರರಾದ ನಂದಕುಮಾರ್ ಶೇಖರ್ ಮತ್ತು ನವೊರೆಮ್‌ ಮಹೇಶ್ ಸಿಂಗ್ ಅವರನ್ನು ಹಿಂದಕ್ಕೆ ಹಾಕಿದ್ದಾರೆ. ಕಳೆದ ಋತುವಿನಲ್ಲಿ ಮುಂಬೈ ಸಿಟಿ ಪರ 22 ಪಂದ್ಯಗಳನ್ನು ಆಡಿದ್ದು 10 ಗೋಲುಗಳನ್ನು ಗಳಿಸಿದ್ದಾರೆ. ಆರು ಗೋಲುಗಳಿಗೆ ನೆರವಾಗಿದ್ದಾರೆ.

ಕಳೆದ ಋತುವಿನಲ್ಲಿ ಡುರಾಂಡ್‌ ಕಪ್‌ ಟೂರ್ನಿಯಲ್ಲಿ ಏಳು ಪಂದ್ಯಗಳನ್ನಾಡಿ ಏಳು ಗೋಲುಗಳನ್ನು ಗಳಿಸಿದ್ದರು.

ADVERTISEMENT

ಎಐಎಫ್‌ಎಫ್‌ ವರ್ಷದ ಮಹಿಳಾ ಆಟಗಾರ್ತಿ ಗೌರಕ್ಕೆ ಮನೀಷಾ ಕಲ್ಯಾಣಿ ಆಯ್ಕೆಯಾಗಿದ್ದಾರೆ. ಸಂಸ್ಥೆಯ ವಾರ್ಷಿಕ ಮಹಾಸಭೆಯ ನಂತರ ಈ ಆಯ್ಕೆ ನಡೆಯಿತು. ಅವರು ಪ್ರಶಸ್ತಿ ಪೈಪೋಟಿಯಲ್ಲಿ ದಲಿಮಾ ಛಿಬ್ಬರ್ ಮತ್ತು ನಗಾಂಬಮ್ ಸ್ವೀಟಿ ದೇವಿ ಅವರನ್ನು ಹಿಂದೆಹಾಕಿದರು.

ಪುರುಷರ ವಿಭಾಗದ ವರ್ಷದ ಕೋಚ್‌ ಪ್ರಶಸ್ತಿಗೆ ಭಾರತ ತಂಡದ ಮಾಜಿ ಆಟಗಾರ ಕ್ಲಿಫರ್ಡ್‌ ಮಿರಾಂಡಾ ಆಯ್ಕೆಯಾಗಿದ್ದಾರೆ. ಅವರು ಒಡಿಶಾ ಎಫ್‌ಸಿ ತಂಡದ ಸೂಪರ್‌ ಕಪ್‌ ಗೆಲುವಿನಲ್ಲಿ ಮಾರ್ಗದರ್ಶನ ಮಾಡಿದ್ದರು.

ಪ್ರಿಯಾ ಪರತಿ ವಳಪ್ಪಿಲ್ ಅವರು ‘ವರ್ಷದ ಮಹಿಳಾ ಕೋಚ್‌’ ಗೌರವ ದೊರೆತಿದೆ. ಭಾರತ ತಂಡದ ಆಟಗಾರ್ತಿಯಾಗಿದ್ದ ಪ್ರಿಯಾ, ಪ್ರಸ್ತುತ ಭಾರತ ಮಹಿಳಾ 17 ವರ್ಷದೊಳಗಿನವರ ತಂಡದ ಮುಖ್ಯ ಕೋಚ್‌ ಆಗಿದ್ದಾರೆ.

ಮುಂಬೈ ಸಿಟಿ ಎಫ್‌ಸಿಯ ಇನ್ನೊಬ್ಬ ಆಟಗಾರ ಆಕಾಶ್ ಮಿಶ್ರಾ ಮತ್ತು ರಾಷ್ಟ್ರೀಯ 17 ವರ್ಷದೊಳಗಿನ ತಂಡದ ಆಟಗಾರ್ತಿ ಶಿಲ್ಜಿ ಶಾಜಿ ಅವರು ಪುರುಷರ ಮತ್ತು ಮಹಿಳೆಯರ ವಿಭಾಗದ ಉದಯೋನ್ಮುಖ ಆಟಗಾರ, ಆಟಗಾರ್ತಿ ಗೌರವಕ್ಕೆ ಪಾತ್ರರಾದರು

ಈ ಆಯ್ಕೆ ಪ್ರಕ್ರಿಯೆಯಲ್ಲಿ ಐ.ಎಂ. ವಿಜಯನ್, ಶಬ್ಬೀರ್ ಅಲಿ, ಬೈಚುಂಗ್ ಭುಟಿಯಾ ಸೇರಿದಂತೆ ಭಾರತ ತಂಡದ ಮಾಜಿ ನಾಯಕರು, ಆಟಗಾರರು ಒಳಗೊಂಡಿದ್ದರು.

ಚಾಂಗ್ಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.