ನಿಯಾನ್, ಸ್ವಿಟ್ಜರ್ಲೆಂಡ್: ಏಳು ಬಾರಿ ಪ್ರಶಸ್ತಿ ವಿಜೇತ ಲಯೊನೆಲ್ ಮೆಸ್ಸಿ ಅವರು 2005ರ ಬಳಿಕ ಇದೇ ಮೊದಲ ಬಾರಿ ‘ಬ್ಯಾಲನ್ ಡಿ ಒರ್‘ ನಾಮನಿರ್ದೇಶನಗೊಂಡವರ ಪಟ್ಟಿಯಿಂದ ಹೊರಗುಳಿದಿದ್ದಾರೆ.
ಪ್ರತಿಷ್ಠಿತ ಪ್ರಶಸ್ತಿಗಾಗಿ 30 ಮಂದಿ ಫುಟ್‌ಬಾಲ್ ಆಟಗಾರರನ್ನು ಶುಕ್ರವಾರ ನಾಮನಿರ್ದೇಶನ ಮಾಡಲಾಗಿದ್ದು, ಅದರಲ್ಲಿ ಅರ್ಜೆಂಟೀನಾ ಆಟಗಾರನ ಹೆಸರು ಇಲ್ಲ.
ಪೋಲೆಂಡ್‌ನ ರಾಬರ್ಟ್ ಲೆವಾಂಡೊಸ್ಕಿ, ಕಳೆದ ವರ್ಷ ಮೆಸ್ಸಿ ಅವರನ್ನು ಹಿಂದಿಕ್ಕಿ ಪ್ರಶಸ್ತಿ ಗೆದ್ದುಕೊಂಡಿದ್ದರು. 2019ರಲ್ಲಿ ಮೆಸ್ಸಿ ಪ್ರಶಸ್ತಿಗೆ ಮುತ್ತಿಕ್ಕಿದ್ದರು. 2020ರಲ್ಲಿ ಕೋವಿಡ್ ಕಾರಣ ಪ್ರಶಸ್ತಿ ಘೋಷಣೆಯಾಗಿರಲಿಲ್ಲ.
ಈ ಬಾರಿ ಬ್ರೆಜಿಲ್‌ನ ತಾರಾ ಆಟಗಾರ ನೇಮರ್ ಕೂಡ ಪಟ್ಟಿಯಲ್ಲಿಲ್ಲ ಲೆವಾಂಡೊಸ್ಕಿ, ಕಿಲಿನ್ ಬಾಪೆ, ಕರೀಂ ಬೆಂಜೆಮಾ, ಅರ್ಲಿಂಗ್ ಹಾಲಂಡ್, ಐದು ಬಾರಿ ವಿಜೇತ ಕ್ರಿಸ್ಟಿಯಾನೊ ರೊನಾಲ್ಡೊ, ಮೊಹಮ್ಮದ್ ಸಲಾ, ಸದಿಯೊ ಮಾನೆ, ಕೆವಿನ್ ಡಿ ಬ್ರೂನ್, ಹ್ಯಾರಿ ಕೇನ್ ನಾಮನಿರ್ದೇಶನಗೊಂಡವರಲ್ಲಿ ಸೇರಿದ್ದಾರೆ.
ಅಕ್ಟೋಬರ್ 17ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಈ ಬಾರಿ ಯೂರೋಪಿಯನ್ ಟೂರ್ನಿಗಳಲ್ಲಿ ತೋರಿದ ಸಾಮರ್ಥ್ಯವನ್ನು ಆಧರಿಸಿ ಪ್ರಶಸ್ತಿ ನೀಡಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.