ADVERTISEMENT

ಫುಟ್‌ಬಾಲ್: ರೊನಾಲ್ಡೊ ಹಿಂದಿಕ್ಕಿ 6ನೇ ಸಲ ಬ್ಯಾಲನ್‌ ಡಿ’ಓರ್‌ ಗೆದ್ದ ಮೆಸ್ಸಿ

ಫುಟ್‌ಬಾಲ್

ಏಜೆನ್ಸೀಸ್
Published 4 ಡಿಸೆಂಬರ್ 2019, 7:38 IST
Last Updated 4 ಡಿಸೆಂಬರ್ 2019, 7:38 IST
   

ಪ್ಯಾರಿಸ್‌: ಫುಟ್‌ಬಾಲ್‌ನ ಪ್ರತಿಷ್ಠಿತ ಬ್ಯಾಲನ್‌ ಡಿ’ಓರ್‌ ಪ್ರಶಸ್ತಿಈ ಬಾರಿ ಅರ್ಜೆಂಟೀನಾ ತಂಡದ ನಾಯಕ ಲಯೊನೆಲ್‌ ಮೆಸ್ಸಿ ಪಾಲಾಯಿತು. ಇದರೊಂದಿಗೆ ಈ ಪ್ರಶಸ್ತಿಯನ್ನು ಆರು ಬಾರಿ ಗೆದ್ದ ಗೌರವಕ್ಕೆ ಮೆಸ್ಸಿ ಪಾತ್ರರಾದರು.

ಇಲ್ಲಿ ನಡೆದ ಸಮಾರಂಭದಲ್ಲಿಸೋಮವಾರ ರಾತ್ರಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮೆಸ್ಸಿ, ‘ಮೊದಲ ಸಲಬ್ಯಾಲನ್‌ ಡಿ’ಓರ್‌ ಗೆದ್ದಾಗ ನನಗೆ 22 ವರ್ಷ. ನನಗೆ ನೆನಪಿದೆ ನಾನು ನನ್ನ ಮೂವರು ಸಹೋದರರೊಂದಿಗೆ ಬಂದಿದ್ದೆ.ಅದಾಗಿ ಹತ್ತು ವರ್ಷ ಕಳೆಯಿತು. ಅದು ಚಿಂತಿಸಬೇಕಾದ ವಿಚಾರವಲ್ಲ. ಇನ್ನೂ ಕೆಲವು ವರ್ಷಗಳ ಕಾಲ ನಾನು ಫುಟ್‌ಬಾಲ್‌ ಆಡಲಿದ್ದೇನೆ ಎಂಬ ವಿಶ್ವಾಸವಿದೆ’ ಎಂದು ಹೇಳಿದ್ದಾರೆ.

ಪ್ರಶಸ್ತಿಗಾಗಿ ಈ ಬಾರಿ ಮೆಸ್ಸಿ, ನೆದರ್ಲೆಂಡ್ಸ್‌ನವರ್ಜಿಲ್‌ ವ್ಯಾನ್‌ ಡಿಕ್‌ ಹಾಗೂ ಪೋರ್ಚುಗಲ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ನಡುವೆ ಪೈಪೋಟಿ ಇತ್ತು. ಮೆಸ್ಸಿ,ವರ್ಜಿಲ್‌ ಹಾಗೂ ರೊನಾಲ್ಡೊ ಕ್ರಮವಾಗಿ ಬಾರ್ಸಿಲೋನಾ, ಲಿವರ್‌ಪೂಲ್‌ ಹಾಗೂಜುವೆಂಟಸ್‌ ಕ್ಲಬ್‌ಗಳ ಪರ ಆಡುತ್ತಾರೆ.

ADVERTISEMENT

ಫ್ರಾನ್ಸ್‌ ಫುಟ್‌ಬಾಲ್‌ ನಿಯತಕಾಲಿಕೆ ನೀಡುವ ಈ ಪ್ರಶಸ್ತಿ ಮೇಲೆ ಆಟಗಾರ ಮೆಸ್ಸಿ, ರೊನಾಲ್ಡೊ ದಶಕಗಳಿಂದಲೂ ಹಿಡಿತ ಸಾಧಿಸಿದ್ದರು. 2008ರಲ್ಲಿರೊನಾಲ್ಡೊ ಮೊದಲ ಸಲ ಪ್ರಶಸ್ತಿ ಗೆದ್ದಿದ್ದರು. ಬಳಿಕ ಪ್ರಾಬಲ್ಯ ಮೆರೆದಿದ್ದ ಮೆಸ್ಸಿ ಸತತ ನಾಲ್ಕು ವರ್ಷ (2009ರಿಂದ 2012ರವರೆಗೆ) ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. 2013 ಹಾಗೂ 14ರಲ್ಲಿ ಮತ್ತೆ ರೊನಾಲ್ಡೊ ಮಿಂಚಿದರೆ, 2015ರಲ್ಲಿ ಮೆಸ್ಸಿ ಗೆದ್ದಿದ್ದರು. 2016 ಹಾಗೂ 2017ರಲ್ಲಿ ಈ ಪ್ರಶಸ್ತಿ ಮತ್ತೆ ರೊನಾಲ್ಡೊ ಪಾಲಾಗಿತ್ತು.

ಆದರೆ,ಹೋದ ವರ್ಷ ಇವರಿಬ್ಬರ ಅಧಿಪತ್ಯವನ್ನು ಕೊನೆಗಾಣಿಸಿಕ್ರೊವೇಷ್ಯಾದ ಲೂಕಾ ಮ್ಯಾಡ್ರಿಕ್‌ ಪ್ರಶಸ್ತಿಗೆ ಮುತ್ತಿಕ್ಕಿದ್ದರು. 2018ರಲ್ಲಿ ರಿಯಲ್ ಮ್ಯಾಡ್ರಿಡ್‌ ಹಾಗೂ ರಾಷ್ಟ್ರೀಯ ತಂಡ ಕ್ರೊವೇಷ್ಯಾ ಪರ ಮ್ಯಾಡ್ರಿಕ್‌ ಕಾಲ್ಚಳಕ ಗಮನಸೆಳೆದಿತ್ತು.

ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿಮೆಸ್ಸಿ ಕಿರಿಯ ಮಗ ಮೊಟಿಯೊ ಮೆಸ್ಸಿ ರೊಕುಜ್ಜೊ ಸಂಭ್ರಮಿಸಿದ್ದ ವಿಡಿಯೊಸಾಕಷ್ಟು ವೈರಲ್‌ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.