ದೋಹಾ: ಪ್ರತಿಷ್ಠಿತ ಮ್ಯಾಂಚೆಸ್ಟರ್ ಯುನೈಟೆಡ್ ಫುಟ್‌ಬಾಲ್ ಕ್ಲಬ್ ಅನ್ನು ಮಾರಾಟ ಮಾಡಲು ಸಿದ್ಧರಿದ್ದೇವೆ ಎಂದು ಅಮೆರಿಕದ ಮೂಲದ ಮಾಲೀಕರು ತಿಳಿಸಿದ್ದಾರೆ.
ಇದರೊಂದಿಗೆ ಮ್ಯಾಂಚೆಸ್ಟರ್ ಯುನೈಟೆಡ್ ಮಾಲೀಕರಾಗಿರುವ ಅಮೆರಿಕದ ಗ್ಲೇಜರ್ ಕುಟುಂಬದ 17 ವರ್ಷಗಳ ಅಧಿಪತ್ಯಕ್ಕೆ ತೆರೆ ಬೀಳುವ ಸಂಭವವಿದೆ.
ಇದನ್ನೂ ಓದಿ:ಮ್ಯಾಂಚೆಸ್ಟರ್ ಯುನೈಟೆಡ್ ತೊರೆದ ರೊನಾಲ್ಡೊ
ಪೋರ್ಚುಗಲ್ ಫುಟ್‌ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ತೊರೆದಿದ್ದಾರೆ. ಇದರ ಬೆನ್ನಲ್ಲೇ ಮ್ಯಾಂಚೆಸ್ಟರ್ ಯುನೈಟೆಡ್ ಮಾರಾಟಕ್ಕಿರುವ ವಿಚಾರ ಬೆಳಕಿಗೆ ಬಂದಿದೆ.
ಹೊಸ ಹೂಡಿಕೆ, ಮಾರಾಟ ಅಥವಾ ಇತರೆ ವಹಿವಾಟು ಸೇರಿದಂತೆ ಎಲ್ಲ ರೀತಿಯ ಪರ್ಯಾಯ ಕಾರ್ಯತಂತ್ರವನ್ನು ಕ್ಲಬ್ ಪರಿಗಣಿಸುತ್ತದೆ ಎಂದು ಮ್ಯಾಂಚೆಸ್ಟರ್ ಯುನೈಟೆಡ್ ಪ್ರಕಟಣೆ ತಿಳಿಸಿದೆ.
ಇಂಗ್ಲೆಂಡ್‌ನ ಒಲ್ಡ್ ಟ್ರಾಫರ್ಡ್ ತಳಹದಿಯ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ಅನ್ನು 2005ರಲ್ಲಿ ಅಮೆರಿಕದ ಗ್ಲೇಜರ್ ಕುಟುಂಬ $934 ಮಿಲಿಯನ್ (£790 ಮಿಲಿಯನ್) ಮೌಲ್ಯಕ್ಕೆ ಸ್ವಾಧೀನಪಡಿಸಿತ್ತು.
2013ರಲ್ಲಿ ಕ್ಲಬ್‌ನ ಮ್ಯಾನೇಜರ್ ಅಲೆಕ್ಸ್ ಫರ್ಗ್ಯೂಸನ್ ನಿವೃತ್ತಿಯ ಬಳಿಕ ಕಳೆದ ಒಂಬತ್ತು ವರ್ಷಗಳಲ್ಲಿ ತಂಡದ ಕಳಪೆ ಪ್ರದರ್ಶನದಿಂದಾಗಿ ಜನಪ್ರಿಯತೆಯಲ್ಲೂ ಕುಸಿದಿದೆ.
ಪ್ರಸ್ತುತ ಪ್ರೀಮಿಯರ್ ಲೀಗ್‌ನಲ್ಲಿ ಮ್ಯಾಂಚೆಸ್ಟರ್ 11 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.