ರಿಯೊ ಡಿ ಜನೈರೊ: ಖ್ಯಾತ ಫುಟ್‌ಬಾಲ್ ತಾರೆ ಬ್ರೆಜಿಲ್‌ನ ನೇಮರ್ ಅವರು ಎಡಗಾಲಿನ ಮಂಡಿಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಕಳೆದ ತಿಂಗಳು ಫುಟ್‌ಬಾಲ್ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಉರುಗ್ವೆ ವಿರುದ್ಧ ಆಡುವಾಗ ಬಿದ್ದು ಎಡಗಾಲಿಗೆ ಪೆಟ್ಟು ಮಾಡಿಕೊಂಡಿದ್ದರು.
ನೇಮರ್ ಅವರು ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದು ಅವರು ಅಂಗಳಕ್ಕೆ ಇಳಿಯಲು ಕನಿಷ್ಠ ಆರು ತಿಂಗಳು ಬೇಕಾಗಬಹುದು ಎಂದು ಬ್ರೇಜಿಲ್ ತಂಡದ ವೈದ್ಯ ರೋಡ್ರಿಗೊ ಲಾಸ್‌ಮಾರ್ ಹೇಳಿದ್ದಾರೆ.
ಎರಡು ದಿನಗಳಲ್ಲಿ ನೇಮರ್ ರಿಯೊ ಡಿ ಜನೈರೊ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದು ಮುಂದಿನ 6 ತಿಂಗಳು ಅವರು ವಿಶ್ರಾಂತಿ ಹಾಗೂ ಫಿಸಿಯೋಥೆರಪಿ ನಿಗಾ ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಮುಂದಿನ ಜೂನ್, ಜುಲೈನಲ್ಲಿ ಆಯೋಜನೆಯಾಗಿರುವ ಕೊಪಾ ಅಮೆರಿಕ ಫುಟ್‌ಬಾಲ್ ಟೂರ್ನಿಯಲ್ಲಿ ನೇಮರ್ ಭಾಗವಹಿಸುವುದು ಸಂದೇಹವಿದೆ ಎಂದು ಫುಟ್‌ಬಾಲ್ ತಜ್ಞರು ತಿಳಿಸಿದ್ದಾರೆ. ಈ ಕುರಿತು ಎನ್‌ಡಿಟಿವಿ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.