ದುಶಾನಬೆ, ತಜಿಕಿಸ್ತಾನ: ಕೊರೊನಾ ಹಾವಳಿಯ ಆತಂಕ ಎದುರಿಸುತ್ತಿರುವ ತಜಿಕಿಸ್ತಾನ ಸರ್ಕಾರ ಕ್ರೀಡಾ ಚಟುವಟಿಕೆ ಮೇಲೆ ತಾತ್ಕಾಲಿಕ ನಿಷೇಧ ಹೇರಿದೆ. ಹೀಗಾಗಿ ತಜಿಕಿಸ್ತಾನ ಫುಟ್‌ಬಾಲ್ ಲೀಗ್‌ನ ಪಂದ್ಯಗಳು ಸೋಮವಾರದಿಂದ ಸ್ಥಗಿತಗೊಳ್ಳಲಿವೆ.
‘ದೇಶಿ ಫುಟ್‌ಬಾಲ್ ಲೀಗ್‌ನ ಭಾನುವಾರದ ಪಂದ್ಯ ನಡೆದಿದೆ.ಕ್ರೀಡಾ ಚಟುವಟಿಕೆ ಮೇಲೆ ಹೇರಿರುವ ನಿಷೇಧ ಸದ್ಯ ಮೇ 10ರ ವರೆಗೆ ಜಾರಿಯಲ್ಲಿರುತ್ತದೆ. ಆ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ತಜಿಕ್ ಫುಟ್‌ಬಾಲ್ ಸಂಸ್ಥೆ ತಿಳಿಸಿದೆ.
ದೇಶದಲ್ಲಿ ಫುಟ್‌ಬಾಲ್ ಋತು ಏಪ್ರಿಲ್ ನಾಲ್ಕರಂದು ಆರಂಭಗೊಂಡಿತ್ತು. ಈ ಸಂದರ್ಭದಲ್ಲಿ ವಿಶ್ವದಾದ್ಯಂತ ಲೀಗ್‌ಗಳು ನಿಂತು ಹೋಗಿದ್ದವು. ತುರ್ಕಮೆನಿಸ್ತಾನದಲ್ಲಿ ಏಪ್ರಿಲ್ 19ರಂದು ಲೀಗ್ ಆರಂಭಗೊಂಡಿತ್ತು. ನಂತರ ಸ್ಥಗಿತಗೊಳಿಸಲಾಗಿತ್ತು. ತುರ್ಕಮೆನಿಸ್ತಾನದಲ್ಲಿ ಈ ವರೆಗೆ ಒಂದು ಕೊರೊನಾ ಸೋಂಕು ಪ್ರಕರಣವೂ ಪತ್ತೆಯಾಗಲಿಲ್ಲ. ತಜಿಕಿಸ್ತಾನದಲ್ಲಿ ಸೋಂಕು ಇಲ್ಲ ಎಂದು ಸರ್ಕಾರ ಹೇಳುತ್ತಿದ್ದರೂ ಕೆಲವು ನಿಗೂಢ ಸಾವು ಸಂದೇಹಕ್ಕೆ ಎಡೆ ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.