ADVERTISEMENT

ಒಲಿಂಪಿಕ್ಸ್‌ ಫುಟ್‌ಬಾಲ್‌: ಮೆಡಿನಾ ಗೋಲಿನಿಂದ ಬಚಾವಾದ ಅರ್ಜೆಂಟೀನಾ

ಒಲಿಂಪಿಕ್ಸ್‌ ಫುಟ್‌ಬಾಲ್‌: ಮೊರಾಕೊ ವಿರುದ್ಧ ಪಂದ್ಯ ‘ಡ್ರಾ’

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 17:06 IST
Last Updated 24 ಜುಲೈ 2024, 17:06 IST
<div class="paragraphs"><p>ಅರ್ಜೆಂಟೀನಾ ತಂಡದ ಸ್ಟಾರ್‌ ಆಟಗಾರ ಲಿಯೊನೆಲ್‌ ಮೆಸ್ಸಿ </p></div>

ಅರ್ಜೆಂಟೀನಾ ತಂಡದ ಸ್ಟಾರ್‌ ಆಟಗಾರ ಲಿಯೊನೆಲ್‌ ಮೆಸ್ಸಿ

   

ಪ್ಯಾರಿಸ್‌ (ರಾಯಿಟರ್ಸ್‌): ಕ್ರಿಸ್ಟಿಯನ್‌ ಮೆಡಿನಾ ಗಳಿಸಿದ ಕೊನೆಯ ಕ್ಷಣದ ಗೋಲಿನಿಂದ ಅರ್ಜೆಂಟೀನಾ ತಂಡ, ಸೇಂಟ್‌ ಇಟಿಯನ್‌ನಲ್ಲಿ ನಡೆದ ಒಲಿಂಪಿಕ್ಸ್‌ ಫುಟ್‌ಬಾಲ್‌ ‘ಬಿ’ ಗುಂಪಿನ ಪಂದ್ಯದಲ್ಲಿ ಬುಧವಾರ ಮೊರಾಕೊ ಎದುರು 2–2 ಗೋಲುಗಳಿಂದ ‘ಡ್ರಾ’ ಮಾಡಿಕೊಳ್ಳುವಲ್ಲಿ ಯಶಸ್ವಿ ಆಯಿತು.

ಕೊಪಾ ಅಮೆರಿಕ ಪ್ರಶಸ್ತಿ ಗೆದ್ದ ತಂಡದಲ್ಲಿದ್ದ ಜೂಲಿಯನ್ ಅಲ್ವಾರೆಝ್‌, ನಿಕೊಲಸ್‌ ಒಟಮಂಡಿ ಮತ್ತು ಜಿರೊನಿಮೊ ರುಲಿ ಈ ಪಂದ್ಯದಲ್ಲಿ ಆಡಿದ್ದರೂ ಹೇಳಿಕೊಳ್ಳುವಂಥ ಆಟ ಆ ತಂಡದಿಂದ ಬರಲಿಲ್ಲ.

ADVERTISEMENT

ಸೌಫಿಯಾನ್ ರಹಿಮಿ ಅವರು ಮೊದಲಾರ್ಧದ ಮುಗಿಯಲು ಕೆಲವೇ ಕ್ಷಣಗಳಿರುಂತೆ ಮೊರಾಕೊ ತಂಡಕ್ಕೆ ಮುನ್ನಡೆ ಒದಗಿಸಿದರು. 49ನೇ ನಿಮಿಷ ರಹಿಮಿ ‘ಪೆನಾಲ್ಟಿ’ ಮೂಲಕ ಎರಡನೇ ಗೋಲು ಗಳಿಸಿದರು. 68ನೇ ನಿಮಿಷ ಅರ್ಜೆಂಟೀನಾ ಗಿಲಿಯಾಣೊ ಸಿಮಿಯೊನ್ ಮೂಲಕ ಅಂತರ ಕಡಿಮೆ ಮಾಡಿಕೊಂಡಿತು. ಸ್ಟಾಪೇಜ್ ಅವಧಿಯ 16ನೇ ನಿಮಿಷ ಮೆಡಿನಾ ಗೋಲು ಹೊಡೆದು ಅರ್ಜೆಂಟೀನಾ ತಂಡವನ್ನು ಕಾಪಾಡಿದರು.

ಸ್ಪೇನ್‌ಗೆ ಜಯ: ಸ್ಪೇನ್‌ ‘ಸಿ’ ಗುಂಪಿನ ಪಂದ್ಯದಲ್ಲಿ ಆರಂಭದಲ್ಲಿ ಪರದಾಡಿದರೂ 2–1 ಗೋಲುಗಳಿಂದ ಉಜ್ಬೇಕಿಸ್ತಾನ ತಂಡವನ್ನು ಸೋಲಿಸುವಲ್ಲಿ ಯಶಸ್ವಿ ಆಯಿತು.

ಮಾರ್ಕ್‌ ಪುಬಿಲ್ ಅವರು ಸ್ಪೇನ್ ತಂಡಕ್ಕೆ ಮುನ್ನಡೆ ಒದಗಿಸಿದರು. ವಿರಾಮಕ್ಕೆ ಕೆಲವೇ ಕ್ಷಣ ಮೊದಲು ಎಲ್ಡೊರ್ ಶೊಮುರೊಡೊವ್ ‘ಪೆನಾಲ್ಡಿ’ ಮೂಲಕ ಗಳಿಸಿದ ಗೋಲಿನಿಂದ ಉಜ್ಬೇಕಿಸ್ತಾನ ಸಮ ಮಾಡಿಕೊಂಡಿತು. ಸ್ಪೇನ್ ತಂಡಕ್ಕೆ ನಂತರ ‘ಪೆನಾಲ್ಟಿ’ ದೊರಕಿದರೂ ಯಶಸ್ಸು ದೊರಕಲಿಲ್ಲ. ಆ ಅವಕಾಶದಲ್ಲಿ ಸೆರ್ಗಿಯೊ ಗೊಮೆಝ್ ಯತ್ನವನ್ನು ಗೋಲ್‌ ಕೀಪರ್ ಅಬ್ದುವೊಹಿದ್‌ ನೆಮಟೊವ್ ತರಡೆದರು. ಆದರೆ 62ನೇ ನಿಮಿಷ ಗೊಮೆಜ್‌ ಅವರೇ ನಿರ್ಣಾಯಕ ಗೋಲು ಗಳಿಸಿ ತಂಡಕ್ಕೆ ಮೂರು ಪಾಯಿಂಟ್ ಗಳಿಸಲು ನೆರವಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.