ADVERTISEMENT

ಫುಟ್‌ಬಾಲ್: ಜನಾಂಗೀಯತೆ ಇನ್ನೂ ಜೀವಂತ- ವಿಕಾಸ್ ದೊರಾಸೂ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2023, 18:38 IST
Last Updated 29 ಮಾರ್ಚ್ 2023, 18:38 IST
ವಿಕಾಸ್ ದೊರಾಸೂ
ವಿಕಾಸ್ ದೊರಾಸೂ   

ಬೆಂಗಳೂರು: ನಾನು ಬಿಳಿಯನೂ ಅಲ್ಲ, ಕಪ್ಪು ಜನಾಂಗದವನೂ ಅಲ್ಲ. ಭಾರತೀಯನಾದ ನಾನು ಪ್ಯಾರಿಸ್‌ನಲ್ಲಿ ಬೆಳೆದೆ. ಆ ಸಂದರ್ಭದಲ್ಲಿ ಸಾಕಷ್ಟು ಜನಾಂಗೀಯ ತಾರತಮ್ಯ ಅನುಭವಿಸಿದೆ ಎಂದು ಫ್ರಾನ್ಸ್ ಫುಟ್‌ಬಾಲ್ ತಂಡದಲ್ಲಿ ಆಡಿದ್ದ ವಿಕಾಸ್ ದೊರಾಸೂ ಹೇಳಿದರು.

ಇಲ್ಲಿಯ ’ಅಲೈಯನ್ಸ್ ಫ್ರಾನ್ಸ್‌ ಡಿ ಬೆಂಗಳೂರು‘ನಲ್ಲಿ ಮಂಗಳವಾರ ನಡೆದ ತಮ್ಮ ಕಾಮಿಕ್‌ ಕೃತಿ ‘ ಜೆ ಪರ್ಡ್ಸ್ ಪಾಸ್‌ ಲಾ ಬಾಲೆ‘ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಕೃತಿಯಲ್ಲಿ ಅವರು ತಮ್ಮ ಹೋರಾಟದ ಬದುಕಿನ ಕುರಿತ ಸಂಗತಿಗಳನ್ನು ದಾಖಲಿಸಿದ್ದಾರೆ.

ಫಿಫಾ ವಿಶ್ವಕಪ್‌ನಲ್ಲಿ ಪದಕ ವಿಜೇತ ತಂಡದಲ್ಲಿ ಆಡಿದ್ದ ಭಾರತ ಮೂಲದ ಏಕೈಕ ಆಟಗಾರ ಆಗಿದ್ದಾರೆ ವಿಕಾಸ್‌. 2006ರಲ್ಲಿ ಫ್ರಾನ್ಸ್ ತಂಡವು ಇಟಲಿ ಎದುರು ಸೋತು ರನ್ನರ್ಸ್ ಅಪ್ ಆಗಿತ್ತು. ಆಗ ಫ್ರಾನ್ಸ್ ತಂಡವನ್ನು ವಿಕಾಸ್ ಪ್ರತಿನಿಧಿಸಿದ್ದರು.

ADVERTISEMENT

‘ಬಾಲ್ಯದಿಂದಲೇ ನಾನು ಬಹಳ ತಾರತಮ್ಯ ಎದುರಿಸಿದ್ದೆ. ಅನವಶ್ಯಕವಾಗಿ ಪೊಲೀಸರು ತಡೆದು ನಿಲ್ಲಿಸುತ್ತಿದ್ದರು. ಏಷ್ಯಾ ಮೂಲದವನಾಗಿ ಪ್ಯಾರಿಸ್‌ನಲ್ಲಿ ಒಂದು ವಾಸಯೋಗ್ಯ ಮನೆ ಪಡೆಯುವುದು ಕಷ್ಟದ ಸ್ಥಿತಿ ಇತ್ತು. ಇಂದಿಗೂ ಏಷ್ಯಾದವರೂ ಈ ಪರಿಸ್ಥಿತಿ ಎದುರಿಸುತ್ತಿದ್ದಾರೆ‘ ಎಂದು ವಿಕಾಸ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.