ADVERTISEMENT

5 ಫುಟ್‌ಬಾಲ್‌ ವಿಶ್ವಕಪ್ ಆಡಿದ್ದ ಮೊದಲಿಗ ಅಂಟೊನಿಯೊ ನಿಧನ

ಎಪಿ
Published 10 ಮೇ 2023, 19:38 IST
Last Updated 10 ಮೇ 2023, 19:38 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮೆಕ್ಸಿಕೊ ಸಿಟಿ: ಐದು ವಿಶ್ವಕಪ್ ಟೂರ್ನಿಗಳನ್ನು ಆಡಿದ ವಿಶ್ವದ ಮೊದಲ ಆಟಗಾರ ಖ್ಯಾತಿಯ ಮೆಕ್ಸಿಕೊದ ಅಂಟೊನಿಯೊ ಕರ್ಬಜಲ್‌ (93) ಮಂಗಳವಾರ ನಿಧನರಾದರು. 

ರಕ್ತದೊತ್ತಡ ತೊಂದರೆಯಿಂದ ಬಳಲುತ್ತಿದ್ದ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಮನೆಗೆ ಮರಳಿದ್ದರು.

ಗೋಲ್‌ಕೀಪರ್ ಆಗಿದ್ದ ಅಂಟೊನಿಯೊ 1950–66ರ ಅವಧಿಯಲ್ಲಿ ವಿಶ್ವಕಪ್‌ ಟೂರ್ನಿಗಳ 11 ಪಂದ್ಯಗಳಲ್ಲಿ ಮೆಕ್ಸಿಕೊ ತಂಡವನ್ನು ಪ್ರತಿನಿಧಿಸಿದ್ದರು. ರಫೆಲ್ ಮಾರ್ಕ್ವೆಜ್‌, ಆ್ಯಂಡ್ರೆಸ್‌ ಗರ್ಡಾಡೊ ಮತ್ತು ಗಿಲೆರ್ಮೊ ಒಚಾವ ಮೆಕ್ಸಿಕೊ ತಂಡಕ್ಕಾಗಿ ಐದು ವಿಶ್ವಕಪ್‌ ಆಡಿದ ಇನ್ನುಳಿದ ಆಟಗಾರರು.

ADVERTISEMENT

ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ, ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ, ಜರ್ಮನಿಯ ಲೋಥರ್‌ ಮಥುವಾಸ್‌ ಮತ್ತು ಇಟಲಿಯ ಗಿಯಾನ್‌ಲೂಗಿ ಬಫೋನ್‌ ಐದು ವಿಶ್ವಕಪ್‌ಗಳಲ್ಲಿ ಕಾಣಿಸಿಕೊಂಡ ಆಟಗಾರರಾಗಿದ್ದಾರೆ.

undefined undefined

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.