ಗೋವಾ: ಒಂದೆಡೆ ಚೆನ್ನೈಯಿನ್ ಎಫ್‌ಸಿ, ಮತ್ತೊಂದೆಡೆ ಎಟಿಕೆ ಎಫ್‌ಸಿ. ಈ ತಂಡಗಳ ಪೈಕಿ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯಲ್ಲಿ ಮೂರನೇ ಕಿರೀಟ ಮುಡಿಗೇರಿಸಿಕೊಳ್ಳುವವರು ಯಾರು.
ಹೀಗೊಂದು ಪ್ರಶ್ನೆ ಈಗ ಫುಟ್‌ಬಾಲ್ ಪ್ರಿಯರನ್ನು ಕಾಡುತ್ತಿದೆ.
ಉಭಯ ತಂಡಗಳು ಈಗಾಗಲೇ ಲೀಗ್‌ನಲ್ಲಿ ತಲಾ ಎರಡು ಬಾರಿ ಚಾಂಪಿಯನ್ ಆಗಿವೆ. ಶನಿವಾರ ಇಲ್ಲಿನ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಪ್ರಶಸ್ತಿ ಗೆದ್ದ ತಂಡ ಹೊಸ ದಾಖಲೆ ಬರೆಯಲಿದೆ. ಲೀಗ್‌ನಲ್ಲಿ ಅತಿ ಹೆಚ್ಚು ಟ್ರೋಫಿ ಜಯಿಸಿದ ಹಿರಿಮೆಗೆ ಆ ತಂಡ ಪಾತ್ರವಾಗಲಿದೆ.
ಕೊರೊನಾ ಸೋಂಕು ಹರಡುವ ಭೀತಿಯಿಂದಾಗಿ ಈ ಪಂದ್ಯವನ್ನು ಪ್ರೇಕ್ಷಕರಿಲ್ಲದೆಯೇ ನಡೆಸಲು ತೀರ್ಮಾನಿಸಲಾಗಿದೆ.
ಉಭಯ ತಂಡಗಳು ಸೆಮಿಫೈನಲ್‌ನಲ್ಲಿ ಅಮೋಘ ಆಟ ಆಡಿದ್ದವು. ಚೆನ್ನೈಯಿನ್ ತಂಡ ಎಫ್‌ಸಿ ಗೋವಾ ಎದುರೂ, ಎಟಿಕೆ ತಂಡ ಹಾಲಿ ಚಾಂಪಿಯನ್ ಬಿಎಫ್‌ಸಿ ವಿರುದ್ಧವೂ ಗೆದ್ದಿದ್ದವು. ಎರಡು ತಂಡಗಳಲ್ಲೂ ಬಲಿಷ್ಠ ಆಟಗಾರರಿರುವುದರಿಂದ ಪ್ರಶಸ್ತಿ ಸುತ್ತಿನಲ್ಲೂ ಜಿದ್ದಾಜಿದ್ದಿನ ಪೈಪೋಟಿ ಕಂಡುಬರುವ ನಿರೀಕ್ಷೆ ಇದೆ.
ಪಂದ್ಯದ ಆರಂಭ: ರಾತ್ರಿ 7.30.
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಮತ್ತು ಹಾಟ್ ಸ್ಟಾರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.