ADVERTISEMENT

ಸ್ಯಾಫ್‌ ಮಹಿಳಾ ಫುಟ್‌ಬಾಲ್‌: ಶಿಬಿರಕ್ಕೆ 29 ಆಟಗಾರ್ತಿಯರು

ಪಿಟಿಐ
Published 17 ಸೆಪ್ಟೆಂಬರ್ 2024, 13:50 IST
Last Updated 17 ಸೆಪ್ಟೆಂಬರ್ 2024, 13:50 IST
Football.
Football.   

ನವದೆಹಲಿ: ಗೋವಾದಲ್ಲಿ ಇದೇ 20ರಿಂದ ನಡೆಯುವ ಭಾರತ ಮಹಿಳಾ ಫುಟ್‌ಬಾಲ್‌ ರಾಷ್ಟ್ರೀಯ ಶಿಬಿರಕ್ಕೆ 29 ಆಟಗಾರ್ತಿಯರನ್ನು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ ಆಯ್ಕೆ ಮಾಡಿದೆ. ತಂಡದಲ್ಲಿ ಅನುಭವಿಗಳೊಂದಿಗೆ ಹೊಸ ಮುಖಗಳಿಗೂ ಸ್ಥಾನ ಕಲ್ಪಿಸಲಾಗಿದೆ.

ನೇಪಾಳದ ಕಠ್ಮಂಡುವಿನಲ್ಲಿ ಅ.17ರಿಂದ 30 ರವರೆಗೆ ನಡೆಯಲಿರುವ ಸ್ಯಾಫ್‌ ಮಹಿಳಾ ಚಾಂಪಿಯನ್‌ಷಿಪ್ ಫುಟ್‌ಬಾಲ್‌ ಟೂರ್ನಿಗೆ ಆಟಗಾರ್ತಿಯರನ್ನು ಗುರುತಿಸುವ ಭಾಗವಾಗಿ ಶಿಬಿರ ಆಯೋಜಿಸಲಾಗಿದೆ. ಮಹಿಳಾ ಫುಟ್‌ಬಾಲ್‌ ತಂಡದ ನೂತನ ಮುಖ್ಯ ಕೋಚ್‌ ಸಂತೋಷ್ ಕಶ್ಯಪ್ ಅವರಿಗೆ ಈ ಟೂರ್ನಿ ಮೊದಲ ಸವಾಲಾಗಿದೆ.

‘ಹಿಂದಿನ ಸ್ಯಾಫ್‌ ಚಾಂಪಿಯನ್‌ಷಿಪ್‌ಗಳಲ್ಲಿ ಭಾರತದ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ ಎಂಬುದರ ಅರಿವಿದೆ. ಆದರೆ, ಈ ಬಾರಿ ಸರಿಯಾದ ತಂತ್ರಗಾರಿಕೆ, ಹೊಂದಾಣಿಕೆಯಿಂದ ಪ್ರಶಸ್ತಿ ಗೆಲ್ಲಲು ಪ್ರಯತ್ನಿಸುತ್ತೇವೆ’ ಎಂದು ಕಶ್ಯಪ್‌ ಪ್ರತಿಕ್ರಿಯಿಸಿದ್ದಾರೆ.

ADVERTISEMENT

ತಂಡ ಹೀಗಿದೆ:

ಗೋಲ್‌ಕೀಪರ್‌: ಎಲಂಗ್ಬಾಮ್ ಪಂಥೋಯ್ ಚಾನು, ಎಂ.ಮೊನಾಲಿಶಾ ದೇವಿ, ಪಾಯಲ್ ರಮೇಶ್

ಡಿಫೆಂಡರ್ಸ್‌: ಅರುಣಾ ಬಾಗ್, ದಲಿಮಾ ಛಿಬ್ಬರ್, ಜಬಾಮಣಿ ತುಡು, ಜೂಲಿ ಕಿಶನ್, ಎಲ್‌. ಆಶಾಲತಾ ದೇವಿ, ಮೌಸುಮಿ ಮುರ್ಮು, ಎನ್‌. ಸ್ವೀಟಿ ದೇವಿ, ಸಂಜು, ಎಸ್‌. ರಂಜನಾ ಚಾನು, ವಾಂಗ್ಖೇಮ್ ಲಿಂತೋಯಿಂಗಂಬಿ ದೇವಿ, ಯುಮ್ಲೆಂಬಮ್ ಪಕ್ಪಿ ದೇವಿ

ಮಿಡ್‌ಫೀಲ್ಡರ್ಸ್‌: ಅಂಜನಾ ಥಾಪಾ, ಅಂಜು ತಮಾಂಗ್, ಡ್ಯಾಂಗ್ಮೆಯ್ ಗ್ರೇಸ್, ಹೇಮಾಮ್ ಶಿಲ್ಕಿ ದೇವಿ, ಕರಿಷ್ಮಾ ಪುರುಷೋತ್ತಮ್ ಶಿರ್ವೋಯ್ಕರ್, ಕಾರ್ತಿಕಾ ಅಂಗಮುತ್ತು, ಮನೀಶಾ, ನವೋರೆಮ್ ಪ್ರಿಯಾಂಕಾ ದೇವಿ, ಎನ್‌. ರತನ್‌ಬಾಲಾ ದೇವಿ, ಸಂಗೀತಾ ಬಾಸ್ಫೋರ್, ಸೌಮ್ಯಾ ಗುಗುಲೋತ್

ಫಾರ್ವರ್ಡ್ಸ್‌: ಜ್ಯೋತಿ, ನಾಗಾಂಗೋಮ್ ಬಾಲಾ ದೇವಿ, ರಿಂಪಾ ಹಲ್ದಾರ್, ಸಂಧಿಯಾ ರಂಗನಾಥನ್. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.