ಬ್ಯೂನಸ್ ಐರಿಸ್: ಫುಟ್‌ಬಾಲ್ ದಿಗ್ಗಜ ಡಿಯೆಗೊ ಮರಡೋನಾ ಮಕ್ಕಳ ವಂಶ ವಾಹಿನಿ (ಡಿಎನ್‌ಎ) ಪತ್ತೆ ಪರೀಕ್ಷೆಗಾಗಿ ಅವರ ದೇಹವನ್ನು ಸಂರಕ್ಷಿಸಬೇಕು. ಅಂತ್ಯಕ್ರಿಯೆ ಮಾಡ ಬಾರದು ಎಂದು ಅರ್ಜೆಂಟೀನಾ ನ್ಯಾಯಾಲಯ ತೀರ್ಪು ನೀಡಿದೆ.
ಮರಡೋನಾ ನವೆಂಬರ್ ಕೊನೆಯ ವಾರ ಹೃದಯಾಘಾತದಿಂದ ನಿಧನರಾಗಿದ್ದರು. ಅವರ ಡಿಎನ್ಎ ಮಾದರಿಗಳನ್ನು ಈಗಾಗಲೇ ಸಂಗ್ರಹಿಸಿ ಕೊಳ್ಳಲಾಗಿದೆ ಎಂದು ಮರಡೋನಾ ಪರ ವಕೀಲರು ಈ ಹಿಂದೆ ತಿಳಿಸಿದ್ದರು. ಆದರೆ, ನ್ಯಾಯಾಲಯವು, ‘ಮುಂದಿನ ದಿನಗಳಲ್ಲಿ ಮರಡೋನಾ ಡಿಎನ್‌ಎ ಮಾದರಿ ಬೇಕಾಗಬಹುದು. ಹೀಗಾಗಿ ದೇಹದ ಅಂತ್ಯಕ್ರಿಯೆ ಮಾಡ ಬಾರದು' ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಈಗಾಗಲೇ, ಮರಡೋನಾ ಮಕ್ಕಳೆಂದು ಐದು ಮಂದಿಯನ್ನು ಗುರುತಿಸಲಾಗಿದೆ. ಆರು ಮಂದಿ ಮರಡೋನಾ ತಮ್ಮ ತಂದೆ ಎಂದು ಹೇಳಿಕೊಂಡು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.