ADVERTISEMENT

‘ಆಲ್‌ರೌಂಡರ್‌ ಎಂದು ಕರೆಸಿಕೊಳ್ಳಬೇಕು’

ರಾಯಿಟರ್ಸ್
Published 7 ಜುಲೈ 2018, 20:12 IST
Last Updated 7 ಜುಲೈ 2018, 20:12 IST
ರೊಮೆಲು ಲುಕಾಕು
ರೊಮೆಲು ಲುಕಾಕು   

ಮಾಸ್ಕೊ: ‘ಜನರು ನನ್ನನ್ನು ಗೋಲು ಗಳಿಸುವ ಆಟಗಾರ ಎಂದಷ್ಟೇ ಪರಿಗಣಿಸುತ್ತಾರೆ. ಆದರೆ, ಆಲ್‌ರೌಂಡ್‌ ಆಟಗಾರ ಎಂದು ಅವರು ನನ್ನನ್ನು ಗುರುತಿಸಬೇಕು ಎಂಬ ಆಕಾಂಕ್ಷೆ ಇದೆ’ ಎಂದು ಬೆಲ್ಜಿಯಂ ತಂಡದ ಮುಂಚೂಣಿ ವಿಭಾಗದ ಆಟಗಾರ ರೊಮೆಲು ಲುಕಾಕು ಹೇಳಿದ್ದಾರೆ.

‘ನಾನೊಬ್ಬನೇ ಗೊಲು ಗಳಿಸಬೇಕೆಂಬ ಆಸೆ ನನಗಿಲ್ಲ. ತಂಡದ ಗೆಲುವಿಗಾಗಿ ಸಹಆಟಗಾರರಿಗೆ ನೆರವು ನೀಡಲು ನಾನು ಇಷ್ಟಪಡುತ್ತೇನೆ’ ಎಂದು ಅವರು ಹೇಳಿದ್ದಾರೆ.

ಬ್ರೆಜಿಲ್‌ ಎದುರಿನ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ರೊಮೆಲು ಲುಕಾಕು ಅವರು ಎರಡನೇ ಗೋಲು ಗಳಿಸಲು ನೆರವಾಗಿದ್ದರು. ಅವರು ಪಾಸ್‌ ಮಾಡಿದ ಚೆಂಡನ್ನು ಕೆವಿನ್‌ ಡಿ ಬ್ರುಯ್ನ್‌ ಅವರು ಗೋಲಾಗಿ ಪರಿವರ್ತಿಸಿದ್ದರು.

ADVERTISEMENT

‘ನನ್ನಲ್ಲಿರುವ ಗೋಲು ಗಳಿಸುವ ಸಾಮರ್ಥ್ಯವನ್ನು ಯಾರಿಗೂ ಸಾಬೀತುಪಡಿಸಬೇಕಿಲ್ಲ. ಅವಕಾಶ ಸಿಕ್ಕಾಗ ನಾನು ಚೆಂಡನ್ನು ಗುರಿ ಸೇರಿಸಬಲ್ಲೆ. ಆದರೆ, ನಾನೊಬ್ಬನೇ ಮುಖ್ಯ ಅಲ್ಲ. ಇಡೀ ತಂಡದ ಗೆಲುವು ಮಾತ್ರ ನಮಗೆ ಮುಖ್ಯವಾಗಬೇಕು. ಹಾಗಾಗಿ ಸಂಘಟಿತ ಹೋರಾಟದಲ್ಲಿ ಮಹತ್ವದ ಪಾತ್ರ ನಿರ್ವಹಿಸಲು ನಾನು ಇಷ್ಟಪಡುತ್ತೇನೆ’ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.