ADVERTISEMENT

ಫುಟ್‌ಬಾಲ್‌: ಸ್ಟೂಡೆಂಟ್ಸ್‌ ಯೂನಿಯನ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 15:30 IST
Last Updated 23 ಅಕ್ಟೋಬರ್ 2024, 15:30 IST
<div class="paragraphs"><p>ಎಂಎಫ್‌ಎಆರ್‌ ಸ್ಟೂಡೆಂಟ್ಸ್‌ ಯೂನಿಯನ್‌ ಎಫ್‌ಸಿ ತಂಡದ ಅಂಕಿತ್‌ ಸಿಂಗ್‌ (ಎಡ), ಖರಿಬಂ ಆಕಾಶ್ (ಬಲ) ಮತ್ತು ರೆಬೆಲ್ಸ್‌ ಎಫ್‌ಸಿ ತಂಡದ ಸಪಂ ಕೆನೆಡಿ ಸಿಂಗ್ (ಮಧ್ಯ) ಚೆಂಡಿಗಾಗಿ ಸೆಣಸಾಟ ನಡೆಸಿದರು </p></div>

ಎಂಎಫ್‌ಎಆರ್‌ ಸ್ಟೂಡೆಂಟ್ಸ್‌ ಯೂನಿಯನ್‌ ಎಫ್‌ಸಿ ತಂಡದ ಅಂಕಿತ್‌ ಸಿಂಗ್‌ (ಎಡ), ಖರಿಬಂ ಆಕಾಶ್ (ಬಲ) ಮತ್ತು ರೆಬೆಲ್ಸ್‌ ಎಫ್‌ಸಿ ತಂಡದ ಸಪಂ ಕೆನೆಡಿ ಸಿಂಗ್ (ಮಧ್ಯ) ಚೆಂಡಿಗಾಗಿ ಸೆಣಸಾಟ ನಡೆಸಿದರು

   

–ಪ್ರಜಾವಾಣಿ ಚಿತ್ರ: ಎಸ್‌.ಕೆ. ದಿನೇಶ್‌

ಬೆಂಗಳೂರು: ಕೊನೆಯ ಕ್ಷಣದಲ್ಲಿ ಅಂಕಿತ್ ಸಿಂಗ್ (90+3ನೇ ನಿಮಿಷ) ಗಳಿಸಿದ ಗೋಲಿನ ನೆರವಿನಿಂದ ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಲೀಗ್‌ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಎಂಎಫ್‌ಎಆರ್‌ ಸ್ಟೂಡೆಂಟ್ಸ್‌ ಯೂನಿಯನ್‌ ಎಫ್‌ಸಿ ತಂಡವು 1–0ಯಿಂದ ರೆಬೆಲ್ಸ್‌ ಎಫ್‌ಸಿ ತಂಡವನ್ನು ಮಣಿಸಿತು.

ADVERTISEMENT

ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇತರ ಪಂದ್ಯದಲ್ಲಿ ಎಫ್‌ಸಿ ಅಗ್ನಿಪುತ್ರ 2–1 ಗೋಲುಗಳಿಂದ ಪರಿಕ್ರಮ ಎಫ್‌ಸಿ ತಂಡವನ್ನು ಸೋಲಿಸಿತು.

ಅಗ್ನಿಪುತ್ರ ಪರ ಧನುಷ್‌ ಆರ್ (44ನೇ ನಿ) ಮತ್ತು ಅಜ್ಫರ್ ನೂರಾನಿ (68ನೇ) ಗೋಲು ಗಳಿಸಿದರು. ಪರಿಕ್ರಮ ಪರ ತೊಬೊಮ್ ಲಂಕಾಮ್ (39ನೇ) ಚೆಂಡನ್ನು ಗುರಿ ಸೇರಿಸಿದರು.

ಗುರುವಾರ ಪಂದ್ಯಗಳು

ಬಿಎಫ್‌ಸಿ– ಬೆಂಗಳೂರು ಇಂಡಿಪೆಂಡೆಂಟ್ಸ್‌ ಎಫ್‌ಸಿ (ಮಧ್ಯಾಹ್ನ 12.45)

ಸೌತ್ ಯುನೈಟೆಡ್‌ ಎಫ್‌ಸಿ– ಕೊಡಗು ಎಫ್‌ಸಿ (ಮಧ್ಯಾಹ್ನ 3.45) 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.