ADVERTISEMENT

ಸೂಪರ್ ಡಿವಿಷನ್‌ ಲೀಗ್‌ ಫುಟ್‌ಬಾಲ್‌: ಸ್ಪೋರ್ಟಿಂಗ್‌ ಕ್ಲಬ್‌ ಶುಭಾರಂಭ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2024, 15:30 IST
Last Updated 7 ಅಕ್ಟೋಬರ್ 2024, 15:30 IST
<div class="paragraphs"><p>ಎಚ್‌ಎಎಲ್ ಎಫ್‌ಸಿಯ ಮೋಹಕ್ ಎಂ. ಮುತ್ತಲಮಣಿ (ಎಡ) ಮತ್ತು ರಿಯಲ್ ಚಿಕ್ಕಮಗಳೂರು ಎಫ್‌ಸಿಯ ಡೆಂಜಿಲ್ ಖರ್ಷಂಡಿ (ಬಲ) ಚೆಂಡಿಗಾಗಿ ಪೈಪೋಟಿ ನಡೆಸಿದರು –</p></div>

ಎಚ್‌ಎಎಲ್ ಎಫ್‌ಸಿಯ ಮೋಹಕ್ ಎಂ. ಮುತ್ತಲಮಣಿ (ಎಡ) ಮತ್ತು ರಿಯಲ್ ಚಿಕ್ಕಮಗಳೂರು ಎಫ್‌ಸಿಯ ಡೆಂಜಿಲ್ ಖರ್ಷಂಡಿ (ಬಲ) ಚೆಂಡಿಗಾಗಿ ಪೈಪೋಟಿ ನಡೆಸಿದರು –

   

ಪ್ರಜಾವಾಣಿ ಚಿತ್ರ: ಎಸ್.ಕೆ. ದಿನೇಶ್

ಬೆಂಗಳೂರು: ಸ್ಪೋರ್ಟಿಂಗ್‌ ಕ್ಲಬ್‌ ಬೆಂಗಳೂರು ತಂಡವು ಇಲ್ಲಿ ಸೋಮವಾರ ಆರಂಭವಾದ ಸೂಪರ್ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದೆ.

ADVERTISEMENT

ಬೆಂಗಳೂರು ಫುಟ್‌ಬಾಲ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸ್ಪೋರ್ಟಿಂಗ್‌ ಕ್ಲಬ್‌ ತಂಡವು 2–0ಯಿಂದ ಬಿಯುಎಫ್‌ಸಿ ತಂಡವನ್ನು ಸೋಲಿಸಿತು. ಸ್ಪೋರ್ಟಿಂಗ್‌ ಪರ ರೋಷನ್ ಸಿಂಗ್ (28ನೇ), ಇಶಾನ್ ರಘುನಂದನ್ (88ನೇ) ತಲಾ ಒಂದು ಗೋಲು ಗಳಿಸಿದರು.

ಮತ್ತೊಂದು ಪಂದ್ಯದಲ್ಲಿ ಚಿಕ್ಕಮಗಳೂರು ಎಫ್‌ಸಿ ತಂಡವು ಎಚ್‌ಎಎಲ್‌ ಎಫ್‌ಸಿ ಜೊತೆ ಗೋಲುರಹಿತವಾಗಿ ಡ್ರಾ ಸಾಧಿಸಿತು.

ಉದ್ಘಾಟನಾ ಸಮಾರಂಭದಲ್ಲಿ ಫುಟ್‌ಬಾಲ್‌ ಮಾಜಿ ಆಟಗಾರರಾದ ಎಂ. ಬಶೀರ್, ಪ್ರೇಮ್‌ಕುಮಾರ್ ಭಾಗವಹಿಸಿದ್ದರು.

ಇಂದಿನ ಪಂದ್ಯಗಳು

ರೂಟ್ಸ್‌ ಎಫ್‌ಸಿ– ಎಂಇಜಿ ಅಂಡ್‌ ಸೆಂಟರ್‌ ಎಫ್‌ಸಿ (ಮಧ್ಯಾಹ್ನ 12.45)

ಎಂಎಫ್‌ಎಆರ್‌ ಸ್ಟೂಡೆಂಟ್ಸ್‌ ಯೂನಿಯನ್‌– ರಿಯಲ್‌ ಬೆಂಗಳೂರು (ಮಧ್ಯಾಹ್ನ 3.45)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.