ADVERTISEMENT

ಫುಟ್‌ಬಾಲ್‌ ಟೂರ್ನಿ | ಶೈಜಾ ಮಿಂಚು: ರೆಬಲ್ಸ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2024, 14:31 IST
Last Updated 14 ಅಕ್ಟೋಬರ್ 2024, 14:31 IST
<div class="paragraphs"><p>ಎಂಇಜಿ ಅಂಡ್‌ ಸೆಂಟರ್ ತಂಡದ ಪ್ರವೇಶ್ ಬಿಶ್ತ್ (ಎಡ) ಮತ್ತು ರೆಬೆಲ್ಸ್ ತಂಡದ ಅವಿನಾಶ್ ವಿ. ಚೆಂಡಿಗಾಗಿ ಸೆಣಸಾಟ ನಡೆಸಿದರು</p></div>

ಎಂಇಜಿ ಅಂಡ್‌ ಸೆಂಟರ್ ತಂಡದ ಪ್ರವೇಶ್ ಬಿಶ್ತ್ (ಎಡ) ಮತ್ತು ರೆಬೆಲ್ಸ್ ತಂಡದ ಅವಿನಾಶ್ ವಿ. ಚೆಂಡಿಗಾಗಿ ಸೆಣಸಾಟ ನಡೆಸಿದರು

   

–ಪ್ರಜಾವಾಣಿ ಚಿತ್ರ/ಪುಷ್ಕರ್‌ ವಿ.

ಬೆಂಗಳೂರು: ರಿನ್ರೀಥನ್ ಶೈಜಾ ಅವರ ಅಮೋಘ ಆಟದ ಬಲದಿಂದ ರೆಬೆಲ್ಸ್‌ ಎಫ್‌ಸಿ ತಂಡವು ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ 2–1 ಗೋಲುಗಳಿಂದ ಎಂಇಜಿ ಅಂಡ್ ಸೆಂಟರ್‌ ಎಫ್‌ಸಿ ತಂಡವನ್ನು ಮಣಿಸಿತು.

ADVERTISEMENT

ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ನಿಯಾಸ್ ನಾಜರ್ ಅವರು 51ನೇ ನಿಮಿಷದಲ್ಲಿ ಎಂಇಜಿ ತಂಡಕ್ಕೆ ಮುನ್ನಡೆ ಒದಗಿಸಿದರು. ಆದರೆ, ಕೊನೆಯ ಹಂತದಲ್ಲಿ ಎರಡು ನಿಮಿಷ ಅಂತರದಲ್ಲಿ ಶೈಜಾ (85ನೇ ಮತ್ತು 87ನೇ) ಡಬಲ್‌ ಗೋಲು ಗಳಿಸಿ ಗೆಲುವಿನ ರೂವಾರಿಯಾದರು.

ಇಂದಿನ ಪಂದ್ಯಗಳು

ಎಎಸ್‌ಸಿ ಅಂಡ್‌ ಸೆಂಟರ್‌ ಎಫ್‌ಸಿ– ಬಿಎಫ್‌ಸಿ (ಮಧ್ಯಾಹ್ನ 12.45)

ರಿಯಲ್ ಚಿಕ್ಕಮಗಳೂರು–  ಬೆಂಗಳೂರು ಇಂಡಿಪೆಂಡೆಂಟ್ಸ್‌ (ಮಧ್ಯಾಹ್ನ 3.45)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.