ADVERTISEMENT

ಎರಡು ದಶಕಗಳ ಫುಟ್‌ಬಾಲ್‌ ಪಯಣ ಅವಿಸ್ಮರಣೀಯ: ಸುನಿಲ್‌ ಚೆಟ್ರಿ

ಸನ್‌ ಕಿಂಗ್‌ನ ಮೂರು ಉತ್ಪನ್ನಗಳನ್ನು ಬಿಡುಗಡೆ ಮಾಡಿದ ಚೆಟ್ರಿ

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 17:02 IST
Last Updated 21 ಜೂನ್ 2024, 17:02 IST
ಸನ್‌ ಕಿಂಗ್‌ನ ಹೊಸ ಉತ್ಪನ್ನಗಳಾದ ಪವರ್‌ಹಬ್ 3300, ಪವರ್‌ಪ್ಲೇ ಪ್ರೊ ಮತ್ತು ಸನ್‌ಕಿಂಗ್‌ ಟಾರ್ಚ್‌ ಪ್ರೊ ಅನ್ನು ಬಿಎಫ್‌ಸಿ ತಂಡದ ನಾಯಕ ಸುನಿಲ್‌ ಚೆಟ್ರಿ ಗುರುವಾರ ಬೆಂಗಳೂರಿನಲ್ಲಿ ಅನಾವರಣಗೊಳಿಸಿದರು. ಸನ್ ಕಿಂಗ್‌ನ ಜನರಲ್ ಮ್ಯಾನೇಜರ್ ಸಾಹಿಲ್ ಖನ್ನಾ, ಬಿಎಫ್‌ಸಿ ಆಟಗಾರರಾದ ಸುರೇಶ್ ವಾಂಗ್‌ಜಮ್ ಮತ್ತು ವಿನೀತ್ ವೆಂಕಟೇಶ್ ಉಪಸ್ಥಿತರಿದ್ದರು.
ಸನ್‌ ಕಿಂಗ್‌ನ ಹೊಸ ಉತ್ಪನ್ನಗಳಾದ ಪವರ್‌ಹಬ್ 3300, ಪವರ್‌ಪ್ಲೇ ಪ್ರೊ ಮತ್ತು ಸನ್‌ಕಿಂಗ್‌ ಟಾರ್ಚ್‌ ಪ್ರೊ ಅನ್ನು ಬಿಎಫ್‌ಸಿ ತಂಡದ ನಾಯಕ ಸುನಿಲ್‌ ಚೆಟ್ರಿ ಗುರುವಾರ ಬೆಂಗಳೂರಿನಲ್ಲಿ ಅನಾವರಣಗೊಳಿಸಿದರು. ಸನ್ ಕಿಂಗ್‌ನ ಜನರಲ್ ಮ್ಯಾನೇಜರ್ ಸಾಹಿಲ್ ಖನ್ನಾ, ಬಿಎಫ್‌ಸಿ ಆಟಗಾರರಾದ ಸುರೇಶ್ ವಾಂಗ್‌ಜಮ್ ಮತ್ತು ವಿನೀತ್ ವೆಂಕಟೇಶ್ ಉಪಸ್ಥಿತರಿದ್ದರು.   

ಬೆಂಗಳೂರು: ‘ಭಾರತ ಫುಟ್‌ಬಾಲ್‌ ತಂಡದಲ್ಲಿ 20 ವರ್ಷಗಳ ಸುದೀರ್ಘ ಪಯಣ ಅವಿಸ್ಮರಣೀಯವಾದುದು. ಇಂತಹ ಅದ್ಭುತ ಅವಕಾಶ ಸಿಕ್ಕಿರುವುದಕ್ಕೆ ನಿಜಕ್ಕೂ ಹೆಮ್ಮೆಪಡುತ್ತೇನೆ’ ಎಂದು ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ಇತ್ತೀಚೆಗೆ ನಿವೃತ್ತಿ ಘೋಷಿಸಿದ ಭಾರತ ತಂಡದ ಮಾಜಿ ನಾಯಕ ಸುನಿಲ್‌ ಚೆಟ್ರಿ ಹೇಳಿದರು.

ನಗರದಲ್ಲಿ ಗುರುವಾರ ಸನ್‌ ಕಿಂಗ್‌ನ ಉತ್ಪನ್ನಗಳಾದ ಪವರ್‌ಹಬ್ 3300, ಪವರ್‌ಪ್ಲೇ ಪ್ರೊ, ಸನ್‌ಕಿಂಗ್‌ ಟಾರ್ಚ್‌ ಪ್ರೊ ಅನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.

‘ಫುಟ್‌ಬಾಲ್‌ ವೃತ್ತಿಜೀವನದಲ್ಲಿ ಇಷ್ಟು ದೂರ ಸಾಗಲು ನನಗೆ ಸಾಕಷ್ಟು ಮಂದಿ ಪ್ರೋತ್ಸಾಹ ನೀಡಿದ್ದಾರೆ. ವಿಶೇಷವಾಗಿ ನನ್ನ ಪೋಷಕರು, ಕೋಚ್‌ಗಳು, ಸಹ ಆಟಗಾರರು ಮತ್ತು ಅಭಿಮಾನಿಗಳ ಪ್ರೋತ್ಸಾಹವನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಅವರಿಗೆ ಸದಾ ಚಿರಋಣಿಯಾಗಿರುತ್ತೇನೆ’ ಎಂದು ತಿಳಿಸಿದರು.

ADVERTISEMENT

‘ಸನ್‌ ಕಿಂಗ್‌ ಸಂಸ್ಥೆಯು ಸೌರಶಕ್ತಿ ಕ್ಷೇತ್ರದಲ್ಲಿ 15 ವರ್ಷಗಳಿಂದ ದೇಶದಲ್ಲಿ ದೊಡ್ಡ ಕ್ರಾಂತಿಯನ್ನು ಮಾಡಿದೆ. ಆಧುನಿಕತೆಯ ಬೇಡಿಕೆಗೆ ತಕ್ಕಂತೆ ಹೊಸ ಉತ್ಪನ್ನಗಳನ್ನು ಪರಿಚಯಿಸುತ್ತಿರುವುದು ಉತ್ತಮ ಬೆಳವಣಿಗೆ. ಈ ಸಂಸ್ಥೆಯೊಂದಿಗೆ ಗುರುತಿಸಿಕೊಳ್ಳುವ ಅವಕಾಶವನ್ನು ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ ಆಟಗಾರರು ಸಂಭ್ರಮಿಸುತ್ತಾರೆ’ ಎಂದು ಬಿಎಫ್‌ಸಿ ನಾಯಕ ಆಗಿರುವ ಚೆಟ್ರಿ ಹೇಳಿದರು.

ಸನ್ ಕಿಂಗ್‌ನ ದಕ್ಷಿಣ ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕ ವಿಭಾಗದ ಜನರಲ್ ಮ್ಯಾನೇಜರ್ ಸಾಹಿಲ್ ಖನ್ನಾ ಮಾತನಾಡಿ, 2008ರಲ್ಲಿ ಒಡಿಶಾದಲ್ಲಿ ಆರಂಭವಾದ ಸನ್‌ಕಿಂಗ್‌ ಸಂಸ್ಥೆಯು ವೇಗವಾಗಿ ಬೆಳೆಯುತ್ತಿದೆ. ಸೌರ ವಿದ್ಯುತ್ ಕ್ಷೇತ್ರದಲ್ಲಿ ಏಷ್ಯಾದಲ್ಲೇ ಮುಂಚೂಣಿಯಲ್ಲಿದ್ದು, 40ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಮಾರುಕಟ್ಟೆ ಹೊಂದಿದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಾ ಬಂದಿದೆ’ ಎಂದು ಹೇಳಿದರು.

‘ಸನ್‌ ಕಿಂಗ್‌ ಸಂಸ್ಥೆಯು ಕಳೆದ ವರ್ಷ ಬಿಎಫ್‌ಸಿ ತಂಡದೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ನಮ್ಮ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ಬಿಎಫ್‌ಸಿ ಆಟಗಾರರು ಕೈಜೋಡಿಸುತ್ತಿದ್ದಾರೆ’ ಎಂದು ಅವರು ತಿಳಿಸಿದರು.

ಬಿಎಫ್‌ಸಿ ತಂಡದ ಆಟಗಾರರಾದ ಸುರೇಶ್ ವಾಂಗ್‌ಜಮ್ ಮತ್ತು ವಿನೀತ್ ವೆಂಕಟೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.