ಮೊಂತೆವಿದೆಯೊ, ಉರುಗ್ವೆ: ಸ್ಟಾರ್ ಸ್ಟ್ರೈಕರ್ ನೇಮರ್ ಅವರು ದಿಗ್ಗಜ ಆಟಗಾರ ಪೆಲೆ ಅವರನ್ನು ಹಿಂದಿಕ್ಕಿ, ಬ್ರೆಜಿಲ್ ಪರ ಅಂತರರಾಷ್ಟ್ರೀಯ ಫುಟ್‌ಬಾಲ್ ಪಂದ್ಯಗಳಲ್ಲಿ ಅತಿಹೆಚ್ಚು ಗೋಲು ಗಳಿಸಿದ ದಾಖಲೆ ತಮ್ಮದಾಗಿಸಿಕೊಂಡರು.
ಬೊಲಿವಿಯಾ ವಿರುದ್ಧ ಶುಕ್ರವಾರ ನಡೆದ ಪಂದ್ಯದಲ್ಲಿ ಎರಡು ಸಲ ಚೆಂಡನ್ನು ಗುರಿ ಸೇರಿಸಿದ ಅವರು ತಮ್ಮ ಒಟ್ಟು ಗೋಲುಗಳ ಸಂಖ್ಯೆಯನ್ನು 79ಕ್ಕೆ ಹೆಚ್ಚಿಸಿಕೊಂಡರು. 2026ರ ವಿಶ್ವಕಪ್ ಟೂರ್ನಿಯ ದಕ್ಷಿಣ ಅಮೆರಿಕ ವಲಯದ ಅರ್ಹತಾ ಹಂತದ ಈ ಪಂದ್ಯವನ್ನು ಬ್ರೆಜಿಲ್ 5–1 ಗೋಲುಗಳಿಂದ ಗೆದ್ದಿತು.
ಪೆಲೆ ಅವರು ಬ್ರೆಜಿಲ್ ಪರ 77 ಗೋಲುಗಳನ್ನು ಗಳಿಸಿದ್ದರು. 31 ವರ್ಷದ ನೇಮರ್ ಈ ದಾಖಲೆಯನ್ನು ಫಿಪಾ ವಿಶ್ವಕಪ್ ಟೂರ್ನಿಯ ವೇಳೆ ಸರಿಗಟ್ಟಿದ್ದರು.
ಬೊಲಿವಿಯಾ ವಿರುದ್ಧದ ಪಂದ್ಯದಲ್ಲಿ ನೇಮರ್ 78ನೇ ನಿಮಿಷ ಮತ್ತು ಇಂಜುರಿ ಅವಧಿಯಲ್ಲಿ ಗೋಲುಗಳನ್ನು ಗಳಿಸಿದರು. ಅವರ 125ನೇ ಅಂತರರಾಷ್ಟ್ರೀಯ ಪಂದ್ಯ ಇದಾಗಿತ್ತು.
ಪೆಲೆ 1957– 1971ರ ಅವಧಿಯಲ್ಲಿ 92 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದರು. ಅವರು ಕಳೆದ ವರ್ಷ ಡಿಸೆಂಬರ್‌ನಲ್ಲಿ ತಮ್ಮ 82ನೇ ವಯಸ್ಸಿನಲ್ಲಿ ನಿಧನರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.