ADVERTISEMENT

ಸೌದಿಯಲ್ಲೂ ದಾಖಲೆ ಮುರಿಯುವುದೇ ನನ್ನ ಗುರಿ: ರೊನಾಲ್ಡೊ

ಏಜೆನ್ಸೀಸ್
Published 4 ಜನವರಿ 2023, 1:58 IST
Last Updated 4 ಜನವರಿ 2023, 1:58 IST
ಸ್ಟಿಯಾನೋ ರೊನಾಲ್ಡೊ
ಸ್ಟಿಯಾನೋ ರೊನಾಲ್ಡೊ   

ರಿಯಾದ್: ದಾಖಲೆ ಮೊತ್ತಕ್ಕೆ ಅಲ್ ನಾಸರ್ ಕ್ಲಬ್ ಸೇರಿರುವ ಪೋರ್ಚುಗಲ್‌ನ ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ, ಸೌದಿ ಅರೇಬಿಯಾದಲ್ಲೂ ದಾಖಲೆ ಬರೆಯುವುದೇ ನನ್ನ ಗುರಿ ಎಂದು ಹೇಳಿದ್ದಾರೆ.

37 ವರ್ಷದ ರೊನಾಲ್ಡೊ ಅವರನ್ನು ಅಲ್ ನಾಸರ್ ಅಭಿಮಾನಿಗಳು ಭರ್ಜರಿಯಾಗಿ ಬರಮಾಡಿಕೊಂಡರು.

ತಮ್ಮನ್ನು ತಾವೇ ವಿಶಿಷ್ಟ ಆಟಗಾರ ಎಂದು ಹೇಳಿರುವ ರೊನಾಲ್ಡೊ, ಯುರೋಪ್‌ನಲ್ಲಿ ಎಲ್ಲ ದಾಖಲೆಗಳನ್ನು ಮುರಿದಿದ್ದೇನೆ. ಇಲ್ಲೂ ಕೆಲವು ದಾಖಲೆಗಳನ್ನು ಮುರಿಯಲು ಬಯಸುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ:

ADVERTISEMENT

ಯುರೋಪ್, ಬ್ರೆಜಿಲ್‌ನಿಂದ ಆಫರ್...
ನಾನು ಇಲ್ಲಿಗೆ ಗೆಲ್ಲಲು, ಆಡಲು ಮತ್ತು ಆನಂದಿಸಲು ಆಗಮಿಸಿದ್ದೇನೆ. ಈ ದೇಶದ ಸಂಸ್ಕೃತಿ ಮತ್ತು ಯಶಸ್ಸಿನ ಭಾಗವಾಗಲು ಉತ್ಸುಕನಾಗಿದ್ದೇನೆ ಎಂದು ಹೇಳಿದರು.

ಯುರೋಪ್ ಹಾಗೂ ಇತರೆಡೆಗಳಿಂದ ಬಂದಿರುವ ಆಫರ್‌ಗಳನ್ನು ತಿರಸ್ಕರಿಸಿರುವುದಾಗಿ ರೊನಾಲ್ಡೊ ತಿಳಿಸಿದರು.

ಯುರೋಪ್‌ನಲ್ಲಿ ನನ್ನ ಕೆಲಸ ಮುಗಿದಿದೆ. ಪೋರ್ಚುಗಲ್‌ ಸೇರಿದಂತೆ ಯುರೋಪ್, ಬ್ರೆಜಿಲ್, ಆಸ್ಟ್ರೇಲಿಯಾ, ಅಮೆರಿಕದಿಂದ ಆಫರ್ ಬಂದಿತ್ತು. ಹಲವು ಕ್ಲಬ್‌ಗಳು ಸಹಿ ಹಾಕಲು ಪ್ರಯತ್ನಿಸಿದ್ದವು. ಆದರೆ ಈ ಕ್ಲಬ್‌ಗೆ ನಾನು ಮಾತನ್ನು ಕೊಟ್ಟಿದ್ದು, ಫುಟ್‌ಬಾಲ್ ಮಾತ್ರವಲ್ಲದೆ ಈ ಅದ್ಭುತ ದೇಶದ ಭಾಗವಾಗಲು ಬಯಸುತ್ತೇನೆ. ನನ್ನ ಪಾಲಿಗಿದು ಸವಾಲಿನಿಂದ ಕೂಡಿರಲಿದೆ ಎಂದು ಹೇಳಿದರು.

ರೊನಾಲ್ಡೊ ಅವರೊಂದಿಗೆ 2025ರವರೆಗೆ ಬರೋಬ್ಬರಿ ₹1,770 ಕೋಟಿ ಮೊತ್ತಕ್ಕೆ (200 ಮಿಲಿಯನ್ ಯುರೋ) ಸೌದಿಯ ಅಲ್ ನಾಸರ್ ಕ್ಲಬ್ ಒಪ್ಪಂದ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.