ADVERTISEMENT

ಉರುಗ್ವೆ ಫುಟ್‌ಬಾಲ್‌ ಸಂಸ್ಥೆಯ ಮೇಲೆ ಕೊರೊನಾ ಪರಿಣಾಮ: ಕೋಚ್‌, 400 ಸಿಬ್ಬಂದಿ ವಜಾ

ಏಜೆನ್ಸೀಸ್
Published 28 ಮಾರ್ಚ್ 2020, 20:00 IST
Last Updated 28 ಮಾರ್ಚ್ 2020, 20:00 IST
ಆಸ್ಕರ್‌ ತಬರೇಜ್‌
ಆಸ್ಕರ್‌ ತಬರೇಜ್‌   

ಮೊಂಟೆವಿಡಿಯೊ, ಉರುಗ್ವೆ: ಕೊರೊನಾ ವೈರಸ್ ಸೋಂಕು ಹಾವಳಿಗೆ ಕ್ರೀಡಾ ಕ್ಷೇತ್ರ ತಲ್ಲಣಿಸಿದೆ. ಉರುಗ್ವೆ ಫುಟ್‌ಬಾಲ್‌ ಅಸೋಸಿಯೇಷನ್‌ (ಎಯುಎಫ್‌) ಮೇಲೂ ಇದರ ಪರಿಣಾಮ ಬೀರಿದ್ದು, ತಂಡದ ಕೋಚ್‌ ಸೇರಿದಂತೆ ಬಹುತೇಕ ಎಲ್ಲ ಸಿಬ್ಬಂದಿಯನ್ನು ವಜಾ ಮಾಡಲಾಗಿದೆ.

‘ಸದ್ಯ ಕೊರೊನಾದಿಂದ ಉಂಟಾದ ಬಿಕ್ಕಟ್ಟಿನಿಂದ ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡಿವೆ. ಅಸೋಸಿಯೇಷನ್‌ನ ಭವಿಷ್ಯದ ಕಾರ್ಯಯೋಜನೆಗಳನ್ನು ಸುಗಮವಾಗಿ ನಡೆಸಲು ಕಠಿಣ ನಿರ್ಧಾರ ಕೈಗೊಳ್ಳಬೇಕಿದೆ’ ಎಂದು ತಂಡದ ಕಾರ್ಯಕಾರಿ ಮಂಡಳಿ ನೀಡಿರುವ ಮಾಹಿತಿಯನ್ನಾಧರಿಸಿ ಎಯುಎಫ್‌ ಶುಕ್ರವಾರ ಹೇಳಿಕೆ ನೀಡಿದೆ.

ಕೋಚ್‌ ಆಸ್ಕರ್‌ ತಬರೇಜ್‌ ಉರುಗ್ವೆ ತಂಡಕ್ಕೆ2006ರಿಂದ ತರಬೇತಿ ನೀಡುತ್ತಿದ್ದರು.

ADVERTISEMENT

73 ವರ್ಷದ ಅವರು ತಂಡವನ್ನು ವಿಶ್ವಕಪ್‌ನ ಫೈನಲ್‌ವರೆಗೆ ಕೊಂಡೊಯ್ದಿದ್ದರು. ಅವರ ನೇತೃತ್ವದ ತಂಡ ಕೋಪಾ ಅಮೆರಿಕ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.